ಡಿಸೆಂಬರ್ 1ರಿಂದ ಎಲ್ಲಾ ವಾಹನಗಳಿಗೂ FASTag ಕಡ್ಡಾಯ?

Update: 2019-10-18 10:28 GMT

ಹೊಸದಿಲ್ಲಿ, ಅ.18: ದೇಶದ ಎಲ್ಲಾ ಟೋಲ್ ಪ್ಲಾಝಾಗಳಲ್ಲಿ ಸರಕಾರ ಡಿಸೆಂಬರ್ 1ರಿಂದ ಫಾಸ್ಟ್ಯಾಗ್  (FASTag) ಕಡ್ಡಾಯಗೊಳಿಸಲಿರುವುದರಿಂದ ಎಲ್ಲಾ ವಾಹನಗಳಲ್ಲಿ FASTag ಅಥವಾ ಇಲೆಕ್ಟ್ರಾನಿಕ್ ಟೋಲ್ ಸಂಗ್ರಹ ಸಾಧನವನ್ನು ಅಳವಡಿಸಬೇಕಾಗಬಹುದು ಎಂದು ವರದಿಯಾಗಿದೆ. ಕೇಂದ್ರ ರಸ್ತೆ ಸಚಿವಾಲಯ ಈ ನಿಟ್ಟಿನಲ್ಲಿ ಸುತ್ತೋಲೆಯನ್ನು ಸಿದ್ಧಪಡಿಸಿದೆಯೆನ್ನಲಾಗಿದ್ದು, ಆದರೆ ಅದನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಈ ನಿರ್ದಿಷ್ಟ FASTag ಅಳವಡಿಸಿದ ವಾಹನಗಳು ಟೋಲ್ ಪ್ಲಾಝಾಗಳಲ್ಲಿ ಟೋಲ್ ಪಾವತಿಸಲು ನಿಲ್ಲದೆ ಹಾಗೆಯೇ ಮುಂದೆ ಸಾಗಹಬಹುದಾಗಿದೆ. ಟೋಲ್ ಪ್ಲಾಝಾಗಳಲ್ಲಿ ಡಿಜಿಟಲ್ ಪಾವತಿಗೆ ಅನುವು ಮಾಡಿಕೊಡಲು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವ ಕ್ರಮ ಇದೆಂದು ಹೇಳಲಾಗಿದೆ.

FASTag ಸಾಧನವನ್ನು ವಾಹನದ ವಿಂಡ್ ಸ್ಕ್ರೀನ್ ಗೆ ಅಳವಡಿಸಬೇಕಾಗಿದೆ. ಅದು ರೇಡಿಯೋ ತರಂಗಾಂತರ ಗುರುತು ತಂತ್ರಜ್ಞಾನ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿ) ಬಳಸಿ ವಾಹನ ಮುಂದಕ್ಕೆ ಸಾಗುತ್ತಿದ್ದಂತೆಯೇ ನೇರವಾಗಿ ಟೋಲ್ ಪಾವತಿಗೆ ಸಹಕರಿಸುತ್ತದೆ. ವಾಹನ ಚಾಲಕನ ಬ್ಯಾಂಕ್ ಖಾತೆ ಜತೆ FASTag ಜೋಡಿಸಲಾಗಿರುತ್ತದೆ.

ಆದರೆ ಟೋಲ್ ಪ್ಲಾಝಾಗಳ ಒಂದು ಲೇನ್ ಅನ್ನು ಹೈಬ್ರಿಡ್ ಲೇನ್ ಆಗಿ ಪರಿವರ್ತಿಸಿ ಈ ಮೂಲಕ ಘನ ವಾಹನಗಳ ಮೇಲೆ ನಿಗಾ ಇಡಲಾಗುವುದಿಲ್ಲದೆ, ಈ ಲೇನ್ ನಲ್ಲಿ ಡಿಜಿಟಲ್ ಹಾಗೂ ನಗದು ಟೋಲ್ ಪಾವತಿಗಳನ್ನು ಸ್ವೀಕರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News