ಬೆಂಗಳೂರು: ಧರ್ಮದ ಹೆಸರಿನಲ್ಲಿ ಭೂತೋಚ್ಛಾಟನೆ ಕಾರ್ಯಕ್ರಮದ ಅನುಮತಿ ರದ್ದುಗೊಳಿಸಿದ ಪೊಲೀಸರು

Update: 2019-10-19 13:12 GMT
ಗಿರೀಶ್ ಭಾರದ್ವಾಜ್

ಬೆಂಗಳೂರು, ಅ.19: ಭಾರತೀಯ ವೀಸಾ ನಿಯಮವನ್ನು ಉಲ್ಲಂಘಿಸಿ ಧರ್ಮದ ಹೆಸರಿನಲ್ಲಿ ಭೂತೋಚ್ಛಾಟನೆ ಮತ್ತು ಧರ್ಮ ಪ್ರಚಾರ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ದೂರು ನೀಡಿದ್ದು, ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಕಾರ್ಯಕ್ರಮ ರದ್ದುಗೊಳಿಸುವಂತೆ ಆಯೋಜಕರಿಗೆ ಆದೇಶಿಸಿದ್ದಾರೆ.

ಮಿಷನರಿ ವೀಸಾ ನಿಯಮಗಳ ಪ್ರಕಾರ ಸೇವೆ ನೀಡಬಹುದೇ ಹೊರತು ಧರ್ಮ ಪ್ರಚಾರ ನಡೆಸುವಂತಿಲ್ಲ. ಆದರೆ ಮಾಲ್ಟ ದೇಶದ ಮಾರ್ಸ್ ಲೋ ಎಂಬವರು ಧರ್ಮದ ಹೆಸರಿನ ಭೂತೋಚ್ಛಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದಾರೆ. ಇದು ಭಾರತೀಯ ವೀಸಾ ನಿಯಮಗಳ ಉಲ್ಲಂಘನೆಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಎಚ್ ಪಿ ನಾಯಕ ಗಿರೀಶ್ ಭಾರದ್ವಾಜ್ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.

ಕೂಡಲೇ ಕ್ರಮ ಕೈಗೊಂಡ ಪೊಲೀಸರು ಕಾರ್ಯಕ್ರಮ ರದ್ದುಗೊಳಿಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News