ಅಸ್ಸಾಂ ಎನ್‌ಆರ್‌ಸಿ ಮುಖ್ಯಸ್ಥನ ಮೇಲೆ ಬಿಜೆಪಿ ವಾಗ್ದಾಳಿ

Update: 2019-10-19 18:01 GMT

ಗುವಾಹತಿ, ಅ. 19: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಉಸ್ತುವಾರಿ ಅಧಿಕಾರಿ ಪ್ರತೀಕ್ ಹಜೇಲಾ ಅವರನ್ನು ಮಧ್ಯಪ್ರದೇಶಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ಒಂದು ದಿನದ ಬಳಿಕ ರಾಜ್ಯ ಬಿಜೆಪಿ ಪ್ರತೀಕ್ ಹಜೇಲಾ ಅವರನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದೆ.

ದೋಷಯುಕ್ತ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡುವ ಮೂಲಕ ಪ್ರತೀಕ್ ಹಜೇಲಾ ಅಸ್ಸಾಮಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಂಜಿತ್ ಕುಮಾರ್ ದಾಸ್ ಆರೋಪಿಸಿದ್ದಾರೆ. ಅಲ್ಲದೆ, ಈ ಕಾರ್ಯಾಚರಣೆಗೆ ವೆಚ್ಚ ಮಾಡಿರುವುದಾಗಿ ಹೇಳಲಾದ 1,600 ಕೋಟಿ ರೂಪಾಯಿ ಮೊತ್ತದ ಬಗ್ಗೆ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.

ಪ್ರತಿ ಒಂದು ರೂಪಾಯಿಯನ್ನೂ ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವ ವರೆಗೆ ಪ್ರತೀಕ್ ಹಜೇಲಾ ಅವರನ್ನು ವರ್ಗಾವಣೆ ಮಾಡಬಾರದು ಎಂದು ದಾಸ್ ಆಗ್ರಹಿಸಿದ್ದಾರೆ.

 ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸರಕಾರಗಳು ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಎತ್ತಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News