ಭಾರೀ ಭೂಕುಸಿತ: 8 ಮಂದಿ ಮೃತ್ಯು

Update: 2019-10-20 09:52 GMT

ಡೆಹ್ರಾಡೂನ್, ಅ.20: ಭೂಕುಸಿತದಿಂದ ಭಾರೀ ಗಾತ್ರ ಕಲ್ಲೊಂದು ಬಿದ್ದ ಪರಿಣಾಮ 8 ಜನರು ಮೃತಪಟ್ಟ ಘಟನೆ ಉತ್ತರಾಖಂಡದ ರುದ್ರಪ್ರಯಾಗ ಸಮೀಪ ನಡೆದಿದೆ.

"ಭೂಕುಸಿತದಿಂದ ಕಲ್ಲುಗಳು ವಾಹನಗಳ ಮೇಲೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಭಾರೀ ಕಲ್ಲುಗಳು ಬಿದ್ದ ಪರಿಣಾಮ ಕೆಲ ವಾಹನಗಳು 500 ಮೀಟರ್ ಆಳದ ಕಣಿವೆಗೆ ಉರುಳಿವೆ. ಈಗಾಗಲೇ 3 ಮೃತದೇಹಗಳನ್ನು ಹೊರತೆಗೆದಿದ್ದು, 5 ಮೃತದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ" ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News