ಬೀದಿ ದನಗಳು ಮಾಂಸಾಹಾರಿಗಳಾಗಿ ಬದಲಾಗಿವೆ ಎಂದ ಬಿಜೆಪಿ ಶಾಸಕ!

Update: 2019-10-20 12:44 GMT

ಗೋವಾ, ಅ.20: ರಾಜ್ಯದ ಕ್ಯಾಲಂಗೂಟ್ ಮತ್ತು ಕ್ಯಾಂಡೋಲಿಮ್ ಗ್ರಾಮದ ಬೀದಿ ದನಗಳು ಮಾಂಸಾಹಾರಿಗಳಾಗಿ ಬದಲಾಗಿದ್ದು, ಅವುಗಳಿಗೆ ಚಿಕಿತ್ಸೆ ನೀಡಲು ಪಶು ತಜ್ಞರನ್ನು ಕರೆಸಲಾಗಿದೆ ಎಂದು ಗೋವಾದ ಬಿಜೆಪಿ ಶಾಸಕ ಮೈಕಲ್ ಲೋಬೋ ಹೇಳಿರುವುದಾಗಿ ವರದಿಯಾಗಿದೆ.

ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿದೆ. ಸಸ್ಯಾಹಾರಿ ಆಹಾರಗಳನ್ನು ತಿನ್ನಲು ನಿರಾಕರಿಸಿದ ಕ್ಯಾಲಂಗೂಟ್ ನ 76  ಬೀದಿ ದನಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ ಎಂದವರು ಹೇಳಿದ್ದಾರೆ.

"ದನಗಳು ಸಸ್ಯಾಹಾರಿ ಎಂದು ನಾವು ಯಾವಾಗಲೂ ಹೇಳುತ್ತೇವೆ. ಆದರೆ ಕ್ಯಾಲಂಗೂಟ್ ನ ದನಗಳು ಮಾಂಸಾಹಾರಿಗಳಾಗಿ ಬದಲಾಗಿವೆ ಮತ್ತು ಹುಲ್ಲು, ಕಡಲೆ ಅಥವಾ ಯಾವುದೇ ವಿಶೇಷ ಪಶು ಆಹಾರವನ್ನು ತಿನ್ನುತ್ತಿಲ್ಲ. ಕ್ಯಾಲಂಗೂಟ್ ಮತ್ತು ಕ್ಯಾಂಡೋಲಿಮ್ ನ ದನಗಳು ಕೋಳಿ ಮಾಂಸದ ತ್ಯಾಜ್ಯಗಳು ಮತ್ತು ಹಳಸಿದ ಮೀನುಗಳನ್ನು ತಿನ್ನುತ್ತಿದ್ದವು" ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News