ಶಾರುಖ್ ಖಾನ್‌ಗೆ ಪ್ರಧಾನಿಯ ‘ದಿಲ್ ಸೆ’ ಸಂದೇಶ

Update: 2019-10-20 15:11 GMT

ಹೊಸದಿಲ್ಲಿ, ಅ.20: ಶನಿವಾರದ ಭೇಟಿಗಾಗಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು,ಮಹಾತ್ಮಾ ಗಾಂಧಿಯವರ ಸಂದೇಶವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಪ್ರಜೆಯೂ ‘ದಿಲ್ ಸೆ (ಹೃದಯಾಂತರಾಳದಿಂದ)’ ಪಾಲ್ಗೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.

‘ದಿಲ್ ಸೆ’ 1998ರಲ್ಲಿ ತೆರೆ ಕಂಡ ಚಿತ್ರವಾಗಿದ್ದು,ಶಾರುಖ್ ಖಾನ್,ಮನೀಷಾ ಕೊಯಿರಾಲಾ ಮತ್ತು ಪ್ರೀತಿ ಝಿಂಟಾ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಪ್ರತಿಯೊಬ್ಬ ಪ್ರಜೆಯೂ ಹೃದಯಾಂತರಾಳದಿಂದ ಕೆಲಸ ಮಾಡಿದರೆ ಪರಿಣಾಮವು ಅದ್ವಿತೀಯವಾಗಿರುತ್ತದೆ ಎಂದು ಮೋದಿ ಟ್ವೀಟಿಸಿದ್ದಾರೆ.

ಶನಿವಾರ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ತನ್ನ ನಿವಾಸದಲ್ಲಿ ಶಾರೂಖ್ ಖಾನ್, ಆಮಿರ್ ಖಾನ್ ಮತ್ತು ಚಿತ್ರರಂಗ ಹಾಗೂ ಕಿರುತೆರೆಯ ಹಲವಾರು ಗಣ್ಯರೊಂದಿಗೆ ಮೋದಿ ಸಂವಾದ ನಡೆಸಿದ್ದರು.

ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಮಹಾತ್ಮಾ ಗಾಂಧಿಯವರನ್ನು ಭಾರತಕ್ಕೆ ಮತ್ತು ಜಗತ್ತಿಗೆ ಪುನರ್‌ಪರಿಚಯಿಸುವ ಅಗತ್ಯವಿದೆ ಎಂದು ಖಾನ್ ಹೇಳಿದ್ದರು. ತನ್ನ ಭಾಷಣದ ವೇಳೆ ಮೋದಿ,ಮಹಾತ್ಮಾ ಗಾಂಧಿಯವರ ಆದರ್ಶಗಳನ್ನು ಜನಪ್ರಿಯಗೊಳಿಸುವಲ್ಲಿ ಉತ್ತಮ ಕಾರ್ಯಕ್ಕಾಗಿ ಚಿತ್ರ ಮತ್ತು ಕಿರುತೆರೆ ಜಗತ್ತನ್ನು ಪ್ರಶಂಸಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News