ಬೆಂಗಳೂರು: ಶೇ.66 ರಷ್ಟು ಆಸ್ಪತ್ರೆಗಳಲ್ಲಿ ಮಾತ್ರ ಇನ್ಸುಲಿನ್ ಔಷಧಿ ಲಭ್ಯ !

Update: 2019-10-20 17:06 GMT

ಬೆಂಗಳೂರು, ಅ.20: ನಗರದ ಶೇ 66 ರಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಅಷ್ಟೇ ಇನ್ಸುಲಿನ್ ಔಷಧಿ ಲಭ್ಯವಿದೆ ಎನ್ನುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಶೇ 80 ರಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಔಷಧಿ ಲಭ್ಯವಿರಬೇಕೆಂದು ಸೂಚಿಸಿದೆ. ಈ ಬಗ್ಗೆ ಕೇರಳದ ಕೋಯಿಕೋಡ್‌ನ ನ್ಯಾಷನಲ್ ಫಾರ್ಮಸಿ ಕಾಲೇಜು ಹಾಗೂ ಅಮೆರಿಕದ ಬಾಸ್ಟನ್ ಯುನಿವರ್ಸಿಸಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಶೋಧಕರು ನಗರದಲ್ಲಿ ನಡೆಸಿದ ಸಂಶೋಧನೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ಔಷಧ ಇಲ್ಲದಿರುವ ಅಂಶ ಪತ್ತೆಯಾಗಿದೆ.

ಫಾರ್ಮಸಿ ಕಾಲೇಜಿನ ವಿದ್ಯಾರ್ಥಿ ಗೌತಮ್ ಸತೀಶ್, ಪ್ರಾಂಶುಪಾಲ ಪ್ರೊಎಂ.ಕೆ.ಉನ್ನಿಕೃಷ್ಣನ್ ಹಾಗೂ ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಅಭಿಷೇಕ್ ಶರ್ಮಾ ಸಂಶೋಧನೆ ನಡೆಸಿದ್ದರು.

ದೇಶದ ಮಾರುಕಟ್ಟೆಯಲ್ಲಿ ಸಿಗುವ ಶೇ.80 ರಷ್ಟು ಇನ್ಸುಲಿನ್ ಔಷಧಿಯನ್ನು ಭಾರತೀಯ ಕಂಪನಿಗಳೇ ತಯಾರಿಸುತ್ತಿವೆ. ಆದರೆ ಇವುಗಳನ್ನು ಮಾರುಕಟ್ಟೆಗೆ ಪೂರೈಸುತ್ತಿರುವವರಲ್ಲಿ ವಿದೇಶಿ ಕಂಪನಿಗಳೇ ಜಾಸ್ತಿ. ತಲಾ 5 ಖಾಸಗಿ ಹಾಗೂ ಸರಕಾರಿ ಆಸ್ಪತ್ರೆ, 30 ಔಷಧಿ ಮಳಿಗೆ ಹಾಗೂ ಜನೌಷಧ ಮಳಿಗೆಗಳಲ್ಲಿ ಮಾಹಿತಿ ಸಂಗ್ರಹಿಸಿ ಸಂಶೋಧನೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News