ಎನ್ ಆರ್ ಸಿ ಜಾರಿ ನಿರ್ಧಾರವನ್ನು ಕೈಬಿಟ್ಟ ಕರ್ನಾಟಕ ಸರಕಾರ

Update: 2019-10-21 10:47 GMT

ಬೆಂಗಳೂರು, ಅ.21: ಅಸ್ಸಾಂನಂತೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿಯ ನಿರ್ಧಾರವನ್ನು ಕರ್ನಾಟಕ ಸರಕಾರ ಕೈಬಿಟ್ಟಿದ್ದು, ದಾಖಲೆಗಳಿಲ್ಲದ ವಲಸಿಗರನ್ನು ಮತ್ತು ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿರುವ ವಿದೇಶಿ ಪ್ರಜೆಗಳನ್ನು ಗುರುತಿಸುವ ಡೇಟಾಬೇಸ್ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಎನ್ ಆರ್ ಸಿಯನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ಗೃಹಸಚಿವ ಬಸವರಾಜ ಬೊಮ್ಮಾಯಿಯವರು ಘೋಷಿಸಿದ ಮರುದಿನ ಈ ನಿರ್ಧಾರವನ್ನು ಸರಕಾರ ಕೈಬಿಟ್ಟಿದೆ ಎಂದು The Times of India ವರದಿ ಮಾಡಿದೆ.

ದಾಖಲೆಗಳ ತಯಾರಿ ಮತ್ತು ನಿರ್ವಹಣೆಗಳಲ್ಲಿರುವ ಪ್ರಾಯೋಗಿಕ ಸಮಸ್ಯೆಗಳಿಂದ ಈ ನಿರ್ಧಾರವನ್ನು ಸದ್ಯಕ್ಕೆ ಕೈಬಿಡಲಾಗಿದೆ. "ನಾವು ಅಸ್ಸಾಂ ಎನ್ ಆರ್ ಸಿಯಂತೆ ರಾಜ್ಯದಲ್ಲಿ ಎನ್ ಆರ್ ಸಿಯನ್ನು ಜಾರಿಗೊಳಿಸುವುದಿಲ್ಲ. ಅಕ್ರಮ ಮತ್ತು ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿರುವವರ ಮಾಹಿತಿ ಕಲೆಹಾಕುತ್ತೇವೆ" ಎಂದು ಬಸವರಾಜ ಬೊಮ್ಮಾಯಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News