ಬೆಂಗಳೂರು: ವಿದೇಶಗಳಿಗೆ ಯುವಕರ ಅಕ್ರಮ ಸಾಗಾಟ ಜಾಲ ಪತ್ತೆ; ಓರ್ವನ ಸೆರೆ

Update: 2019-10-22 07:44 GMT

ಬೆಂಗಳೂರು, ಅ.22: ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಅಮಾಯಕ ನೇಪಾಳಿ ಯುವಕರನ್ನು ಅಕ್ರಮವಾಗಿ ವಿದೇಶಗಳಿಗೆ ಸಾಗಿಸುತ್ತಿದ್ದ ಜಾಲವೊಂದನ್ನು ಭೇದಿಸಿರುವ ಬೆಂಗಳೂರು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಶದಲ್ಲಿದ್ದ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ.

ನೇಪಾಳ ನಿವಾಸಿ ಬಾಬು ಗಿರಿ(40) ಬಂಧಿತ ಆರೋಪಿ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಶಂಭುಗಿರಿ ಮತ್ತು ಆರ್.ಪಿ.ಶರ್ಮಾ ಎಂಬವರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮಾಲ್ಡೀವ್ಸ್ ಮುಂತಾದ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೇಪಾಳದಿಂದ ಅಮಾಯಕ ಯುವಕರನ್ನು ಕರೆತಂದು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ಇರಿಸಿದ್ದರು. ಅಮಾಯಕ ಯುವಕರಿಂದ ಹಣ ಪಡೆದು ಅವರನ್ನು ಆರ್.ಪಿ.ಶರ್ಮಾ ಮೂಲಕ ವಿದೇಶಗಳಿಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ವಂಚನಾ ಜಾಲವನ್ನು ಭೇದಿಸಿದ್ದಾರೆ. ಅವರ ವಶದಲ್ಲಿದ್ದ ಒಂಬತ್ತು ಮಂದಿಯನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News