ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ ವೇತನಭಾಗ್ಯ

Update: 2019-10-22 16:25 GMT

ಹೊಸದಿಲ್ಲಿ,ಅ.22: ಕೇಂದ್ರಾಡಳಿತ ಪ್ರದೇಶಗಳಾಗಲಿರುವ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಎಲ್ಲ ಸರಕಾರಿ ನೌಕರರು ಅ.31ರಿಂದ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ವೇತನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಸರಕಾರವು ಮಂಗಳವಾರ ಪ್ರಕಟಿಸಿದೆ. 4.5 ಲಕ್ಷ ಸರಕಾರಿ ನೌಕರರು ಇದರ ಲಾಭ ಪಡೆಯಲಿದ್ದಾರೆ.

ಸರಕಾರದ ಬೊಕ್ಕಸಕ್ಕೆ 4,800 ಕೋ.ರೂ.ಗಳ ಹೆಚ್ಚುವರಿ ಹೊರೆಯನ್ನುಂಟು ಮಾಡುವ ಈ ಕ್ರಮವನ್ನು ಗೃಹಸಚಿವ ಅಮಿತ್ ಶಾ ಅವರು ಈ ಹಿಂದೆ ಅನುಮೋದಿಸಿದ್ದರು. ಈ ನೌಕರರಿಗೆ ಮಕ್ಕಳ ಶಿಕ್ಷಣ ಭತ್ತೆ,ಪ್ರಯಾಣ ಭತ್ತೆ, ಎಲ್‌ಟಿಸಿ, ನಿಗದಿತ ವೈದ್ಯಕೀಯ ಭತ್ತೆಯಂತಹ ಎಲ್ಲ ಇತರ ಭತ್ತೆಗಳನ್ನು ಪಾವತಿಸುವ ಪ್ರಸ್ತಾವವನ್ನೂ ಅವರು ಒಪ್ಪಿಕೊಂಡಿದ್ದರು ಎಂದು ಸರಕಾರದ ಹೇಳಿಕೆಯು ತಿಳಿಸಿದೆ.

 ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅ.31ರಿಂದ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News