ಎಚ್‌ಎಎಲ್ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ

Update: 2019-10-22 17:02 GMT

ಬೆಂಗಳೂರು, ಅ.22: ವೇತನ ಪರಿಷ್ಕರಣೆ ವಿಚಾರವಾಗಿ ವಿಮಾನ ತಯಾರಕ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ನೌಕರರು ನಡೆಸುತ್ತಿರುವ ಮುಷ್ಕರ ನಿಲ್ಲಿಸುವಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.

ಈ ಕುರಿತು ಎಚ್‌ಎಎಲ್ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಎಚ್‌ಎಎಲ್ ನೌಕರರ ಒಕ್ಕೂಟವು ಅ.14ರಿಂದ ಮುಷ್ಕರವನ್ನು ನಡೆಸುತ್ತಿದೆ. ಇದರಿಂದ, ಎಚ್‌ಎಎಲ್‌ಗೆ ನಷ್ಟವುಂಟಾಗಿ ಕೆಲಸವೂ ನಿಧಾನವಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ನೌಕರರಿಗೆ ಮುಷ್ಕರ ನಿಲ್ಲಿಸುವಂತೆ ಮಧ್ಯಂತರ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News