ಉದ್ಯೋಗವಿಲ್ಲದೆ ಮೂವರು ಕಟ್ಟಡ ನಿರ್ಮಾಣ ಕಾರ್ಮಿಕರು ಆತ್ಮಹತ್ಯೆಗೆ ಶರಣು

Update: 2019-10-28 12:42 GMT

ಹೈದರಾಬಾದ್, ಅ.28: ಆಂಧ್ರ ಪ್ರದೇಶದ ತೆನಾಲಿ, ಗುಂಟೂರು ಹಾಗೂ ಮಂಗಲಗಿರಿ ಪ್ರಾಂತ್ಯಗಳಿಂದ ವರದಿಯಾದ ಪ್ರತ್ಯೇಕ ಘಟನೆಗಳಲ್ಲಿ ನಿರ್ಮಾಣ ಕ್ಷೇತ್ರದ ಕನಿಷ್ಠ ಮೂವರು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಈ ತಿಂಗಳು ವರದಿಯಾಗಿವೆ.

ನಿರ್ಮಾಣ ಕ್ಷೇತ್ರದಲ್ಲಿನ ನಿಧಾನಗತಿ, ರಾಜ್ಯದ ಮರಳು ನೀತಿಯಿಂದಾಗಿ ಸಾಕಷ್ಟು ಕೆಲಸ ದೊರಕದೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು  ಹೇಳಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ಒಬ್ಬರಾದ ಗುಂಟೂರಿನ ವೆಂಕಟೇಶ್  ಆತ್ಮಹತ್ಯೆಗೈಯ್ಯುವ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದು ಇದೀಗ ಬೆಳಕಿಗೆ ಬಂದಿದೆ. ತಾನು ನಿರುದ್ಯೋಗಿಯಾಗಿರುವುದು ಹಾಗೂ ಜೀವನೋಪಾಯಕ್ಕೆ ಬೇರೆ ದಾರಿಯಿಲ್ಲದೇ ಇರುವುದರಿಂದ ಆತ್ಮಹತ್ಯೆಗೈಯ್ಯುವುದಾಗಿ ಅದರಲ್ಲಿ ಅವರು ಹೇಳಿದ್ದರು. ವೆಂಕಟೇಶ್ ಕಳೆದ ನಾಲ್ಕು ತಿಂಗಳುಗಳಿಂದ ನಿರುದ್ಯೋಗಿಯಾಗಿದ್ದರು ಎಂದು ಪತ್ನಿ ರಾಶಿ ಹೇಳುತ್ತಾರೆ.

ತೆನಾಲಿಯ ನಾಗ ಬ್ರಹ್ಮಾಜಿ ಹಾಗೂ ಮಂಗಳಗಿರಿಯ ಇನ್ನೊಬ್ಬ ಕಾರ್ಮಿಕ ಕೂಡ ನಿರುದ್ಯೋಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News