ಕಾರ್ಯತಂತ್ರದ ಸಹಭಾಗಿತ್ವ ಮಂಡಳಿ ಸ್ಥಾಪನೆ ಭಾರತ-ಸೌದಿ ಸಂಬಂಧ ವೃದ್ಧಿಗೆ ಪೂರಕ: ಮೋದಿ

Update: 2019-10-28 17:18 GMT

ಹೊಸದಿಲ್ಲಿ, ಅ.28: ಕಾರ್ಯತಂತ್ರದ ಸಹಭಾಗಿತ್ವ ಮಂಡಳಿಯ ಸ್ಥಾಪನೆ ಭಾರತ-ಸೌದಿ ಅರೇಬಿಯಾ ನಡುವಿನ ಸಂಬಂಧವನ್ನು ಇನ್ನಷ್ಟು ಉನ್ನತಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ತೆರಳುವ ಮುನ್ನ ಮಾತನಾಡಿದ ಮೋದಿ, ಸೌದಿ ಅರೇಬಿಯಾದ ಯುವರಾಜರೊಂದಿಗೆ ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ಮತ್ತು ಪರಸ್ಪರ ಹಿತಾಸಕ್ತಿ ವಿಷಯಗಳ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಭಾರತ ಮತ್ತು ಸೌದಿ ಅರೇಬಿಯಾಗಳು ಸಾಂಪ್ರದಾಯಿಕವಾಗಿ ನಿಕಟ ಮತ್ತು ಆತ್ಮೀಯ ಸಂಬಂಧ ಹೊಂದಿವೆ. ಭಾರತದ ಇಂಧನ ಕ್ಷೇತ್ರದ ಅವಶ್ಯಕತೆಯನ್ನು ಪೂರೈಸುವ ಬೃಹತ್ ಮತ್ತು ವಿಶ್ವಾಸಾರ್ಹ ದೇಶಗಳಲ್ಲಿ ಸೌದಿ ಅರೇಬಿಯಾ ಸೇರಿದೆ.

ಅಲ್ಲದೆ ರಿಯಾದ್‌ನಲ್ಲಿ ನಡೆಯಲಿರುವ 3ನೇ ‘ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನೀಷಿಯೇಟಿವ್ ಫೋರಂ’ನಲ್ಲಿ ಭಾಗವಹಿಸಿ, ಭಾರತದಲ್ಲಿ ಹೆಚ್ಚುತ್ತಿರುವ ಹೂಡಿಕೆ ಮತ್ತು ವ್ಯಾಪಾರದ ಅವಕಾಶಗಳ ಬಗ್ಗೆ ಮಾತನಾಡಲು ಉತ್ಸುಕನಾಗಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News