ಬೇಧಿಸಲಾಗದ ಪತ್ರಕರ್ತರ ಹತ್ಯೆ ಪ್ರಕರಣ: ಭಾರತದಿಂದ ಅತ್ಯಂತ ಕಳಪೆ ಸಾಧನೆ

Update: 2019-10-29 18:52 GMT
ಫೊಟೋ ಕೃಪೆ: UNESCO / MANILA BULLETIN

ಹೊಸದಿಲ್ಲಿ, ಅ. 29: ಪತ್ರಕರ್ತರನ್ನು ಹತ್ಯೆ ಮಾಡಿದ ಹಂತಕರನ್ನು ದಂಡನೆಗೆ ಗುರಿಪಡಿಸುವಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವ ಜಗತ್ತಿನ ದೇಶಗಳಲ್ಲಿ ಭಾರತ ಕೂಡ ಒಂದು ಎಂದು ‘ಪತ್ರಕರ್ತರ ರಕ್ಷಾ ಸಮಿತಿ’ ಹೇಳಿದೆ.

ಮಂಗಳವಾರ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ‘ಪತ್ರಕರ್ತರ ರಕ್ಷಣಾ ಸಮಿತಿ’, 2009 ಸೆಪ್ಟಂಬರ್‌ನಿಂದ 2019 ಆಗಸ್ಟ್‌ರ ನಡುವೆ 17 ದಂಡನೆಗೆ ಗುರಿಪಡಿಸಲಾಗದ ಪತ್ರಕರ್ತರ ಹತ್ಯೆ ಪ್ರಕರಣಗಳುಳ್ಳ ಭಾರತ 13ನೇ ಸ್ಥಾನ (ಪತ್ರಕರ್ತರನ್ನು ಹತ್ಯೆ ಮಾಡಿದ ಹಂತಕರನ್ನು ದಂಡನೆಗೆ ಗುರಿಪಡಿಸದ ಜಗತ್ತಿನ 13 ದೇಶಗಳ ಪಟ್ಟಿ) ಪಡೆದುಕೊಂಡಿದೆ ಎಂದಿದೆ.

15 ದಶಲಕ್ಷ ಜನಸಂಖ್ಯೆ ಇರುವ ಸೋಮಾಲಿಯದಲ್ಲಿ 25 ಪತ್ರಕರ್ತರ ಹತ್ಯೆ ಪ್ರಕರಣ ಬೇಧಿಸಿಲ್ಲ. ಈ ಹಿನ್ನೆಲೆಯಲ್ಲಿ ಸೋಮಾಲಿಯ ಈ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದೆ. ಪಿಲಿಪ್ಪೈನ್‌ನಲ್ಲಿ ಅತ್ಯಧಿಕ 41 ಬೇಧಿಸಲಾರದ ಹತ್ಯೆಗಳು ವರದಿಯಾಗಿವೆ.

ಪತ್ರಕರ್ತ ಅಥವಾ ಪತ್ರಕರ್ತೆಯ ಹತ್ಯೆಯನ್ನು ಆತ ಅಥವಾ ಆಕೆಯ ಕೆಲಸಕ್ಕೆ ಸಂಬಂಧಿಸಿ ಉದ್ದೇಶಪೂರ್ವಕ ಕೊಲೆ ಎಂದು ವ್ಯಾಖ್ಯಾನಿಸುವುದು ‘ಜಾಗತಿಕ ದಂಡನೆಗೆ ಗುರಿಪಡಿಸಲಾಗದ ಸೂಚ್ಯಂಕ’ ಉದ್ದೇಶ. ಅಪಾಯಕಾರಿ ವರದಿ ಅಥವಾ ಹೋರಾಟದಲ್ಲಿ ಸಾವನ್ನಪ್ಪಿದ ಪತ್ರಕರ್ತರು ಇದರಲ್ಲಿ ಒಳಗೊಳ್ಳುವುದಿಲ್ಲ. ಯಾವುದೇ ಶಿಕ್ಷೆಗೆ ಗುರಿಯಾಗದಿದ್ದರೆ ಅಂತಹ ಪ್ರಕರಣವನ್ನು ಭೇದಿಸಲಾಗದ ಪ್ರರಣ ಎಂದು ವ್ಯಾಖ್ಯಾನಿಸಲಾಗುತ್ತದೆ.

ಭೇದಿಸಲಾಗದ ಪ್ರಕರಣಗಳಲ್ಲಿ ಭಾರತ 13 ದೇಶಗಳಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ ಹಾಗೂ ಪಾಕಿಸ್ತಾನ, ದಕ್ಷಿಣ ಸುಡಾನ್, ನೈಜೀರಿಯಾ, ಅಫಘಾನಿಸ್ತಾನ ಹಾಗೂ ರಶ್ಯಾಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.

ಜನಸಂಖ್ಯೆಯ ಕಾರಣಕ್ಕಾಗಿ ಭಾರತ ಈ ಸೂಚ್ಯಾಂಕದಲ್ಲಿ ಕೆಳಗಿನ ಸ್ಥಾನದಲ್ಲಿದೆ. ಸಿಪಿಜೆಯ ‘ದಂಡನೆಗೊಳಗಾಗದ ಸೂಚ್ಯಂಕ’ ಭೇದಿಸಲಾಗದ ಹತ್ಯೆಯನ್ನು ಆ ದೇಶ ಜನಸಂಖ್ಯೆಯಿಂದ ಭಾಗಿಸುತ್ತದೆ. ಗೌರಿ ಲಂಕೇಶ್ ಹಾಗೂ ಶುಜಾತ್ ಬುಖಾರಿ ಹತ್ಯೆ ಹಾಗೂ ಇತರ ಕೆಲವು ಹತ್ಯೆಗಳು ಬೇಧಿಸಲಾಗದ ಭಾರತದ ಕೆಲವು  ಪ್ರಮುಖ ಹತ್ಯೆ ಪ್ರಕರಣಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News