ಶೀಘ್ರವೇ ಚಂದ್ರನಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಇನ್ನೊಂದು ಯತ್ನ: ಕೆ.ಶಿವನ್

Update: 2019-11-02 17:23 GMT

ಹೊಸದಿಲ್ಲಿ,ನ.2: ಚಂದ್ರನ ಮೇಲೆ ಲಗ್ಗೆಯಿಡುವ ಭಾರತದ ಪ್ರಯತ್ನದ ಕಥೆಯು ಚಂದ್ರಯಾನ-2ರಿಂದಲೇ ಕೊನೆಗೊಂಡಿಲ್ಲವೆಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ತೆ ಇಸ್ರೋದ ವರಿಷ್ಠ ಕೆ.ಶಿವನ್ ತಿಳಿಸಿದ್ದಾರೆ. ನಿಕಟ ಭವಿಷ್ಯದಲ್ಲಿ ಭಾರತವು ಚಂದ್ರನಲ್ಲಿ ನೌಕೆಯನ್ನು ಇಳಿಸುವ ಇನ್ನೊಂದು ಪ್ರಯತ್ನವನ್ನು ನಡೆಸಲಿದೆಎಯಂದು ಅವರು ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಸುವರ್ಣ ಮಹೋತ್ಸವ ಸಮಾರಂಭಲ್ಲಿ ಭಾಗವಹಿಸಿ ಮಾತನಾಡಿದ ಅವರು , ಮುಂಬ ರುವ ತಿಂಗಳುಗಳಲ್ಲಿ ಹಲವಾರು ಸುಧಾರಿತ ಉಪಗ್ರಹಗಳನ್ನು ಇಸ್ರೋ ಉಡಾವಣೆ ಗೊಳಿಸಲಿದೆ ಎಂದರು.

ಚಂದ್ರಯಾನ 2 ಬಗ್ಗೆ ಪ್ರಸ್ತಾವಿಸಿದ ಅವರು,‘‘ ತಾಂತ್ರಿಕವಾಗಿ ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್‌ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಚಂದ್ರನ ಮೇಲ್ಮೈನಿಂದ 300 ಮೀಟರ್ ದೂರವರೆಗೆ ಎಲ್ಲಾ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದವು’’ ಎಂದರು.

ಚಂದ್ರಯಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಅತ್ಯಂತ ಅಮೂಲ್ಯವಾದ ದತ್ತಾಂಶಗಳು ಲಭ್ಯವಾಗಿವೆ. ನಿಕಟ ಭವಿಷ್ಯದಲ್ಲಿ ಚಂದ್ರಲ್ಲಿ ಸಾಫ್ಟ್‌ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು ಇಸ್ರೋ ತನ್ನ ಸಕಲ ಅನುಭವ,ಜ್ಞಾನ ಹಾಗೂ ತಂತ್ರಜ್ಞಾನದ ನೈಪುಣ್ಯತೆಯನ್ನು ಬಳಸಿಕೊಳ್ಳಲಿದೆ ಎಂದು ಶಿವನ್ ತಿಳಿಸಿದರು.

ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಇನ್ನೊಂದು ಲ್ಯಾಂಡಿಂಗ್‌ಗೆ ಪ್ರಯತ್ನಿಸಲಿದೆಯೇ ಎಂಬ ಪ್ರಶ್ನೆಗೆ ಅವರು, ‘ ಖಂಡಿತವಾಗಿಯೂ’ ಎಂದುತ್ತರಿಸಿದರು.

 ‘ಚಂದ್ರಯಾನ 2 ಕಥೆಯ ಅಂತ್ಯವಲ್ಲ. ಸೂರ್ಯನನ್ನು ಸಮೀಪಿಸುವ ಆದಿತ್ಯ ಎಲ್1 ಯೋಜನೆ, ಮಾನವನ ಬಾಹ್ಯಾಕಾಶ ಯಾತ್ರೆ ಕಾರ್ಯಕ್ರಮಗಳು ಪೂರ್ವನಿಗದಿಯಂತೆಯೇ ನಡೆಯುತ್ತಿದೆ. ಮುಂಬರುವ ತಿಂಗಳುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸುಧಾರಿತ ಉಪಗ್ರಹಗಳನ್ನು ಉಡಾವಣೆಗೊಳಿಸಲಾಗುವುದು ಎಂದು ಇಸ್ರೋ ವರಿಷ್ಠ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News