ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ: ಗಡ್ಕರಿಯನ್ನು ಭೇಟಿಯಾದ ಅಹ್ಮದ್ ಪಟೇಲ್

Update: 2019-11-06 07:15 GMT
Photograph:( AFP )

ಮುಂಬೈ, ನ.6: ಮಹಾರಾಷ್ಟ್ರ ಸರಕಾರ ರಚನೆಗಾಗಿ ರಾಜಕೀಯ ಕಸರತ್ತು ಮುಂದುವರಿದಿರುವಂತೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬುಧವಾರ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಮೀಪವರ್ತಿ ಅಹ್ಮದ್ ಪಟೇಲ್ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿರುವುದು ಕುತೂಹಲ ಸೃಷ್ಟಿಸಿದೆ.

ಬಿಜೆಪಿ ಜತೆಗೆ ಅಧಿಕಾರ ಹಂಚಿಕೆ ವಿಚಾರದಲ್ಲಿ ನಿಲುವನ್ನು ಶಿವಸೇನೆ ಬದಲಿಸದಿರುವ ಹಿನ್ನೆಲೆಯಲ್ಲಿ ಇತ್ತಂಡಗಳನ್ನೂ ಸಂತೈಸಲು ಆರೆಸ್ಸೆಸ್ ನಿತಿನ್ ಗಡ್ಕರಿಯತ್ತ ತಿರುಗಿದ ನಂತರ ಈ ಬೆಳವಣಿಗೆ ನಡೆದಿದೆ.

ಗಡ್ಕರಿ ಜತೆಗಿನ ತಮ್ಮ ಭೇಟಿಯ ವೇಳೆ ಮಹಾರಾಷ್ಟ್ರ ವಿಚಾರ ಚರ್ಚೆಯಾಗಿದೆ ಎಂಬುದನ್ನು ಪಟೇಲ್  ನಿರಾಕರಿಸಿದರೂ ಅವರು ಕೇಂದ್ರ ಸಚಿವರನ್ನು ಭೇಟಿಯದ ಸಮಯ ಮಹತ್ವ ಪಡೆದಿದೆ.  ವಿಪಕ್ಷಗಳ ಜತೆಗೆ ಗಡ್ಕರಿ ಆತ್ಮೀಯ ಸಂಬಂಧ ಹೊಂದಿರುವುದೂ ಇಲ್ಲಿ ಉಲ್ಲೇಖನೀಯ. ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 18ರಂದು ಆರಂಭಗೊಳ್ಳಲಿರುವುದರಿಂದ ಈ ಸಂಬಂಧ ಇಬ್ಬರ ನಡುವೆ ಭೇಟಿ ನಡೆದಿರಬಹುದೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News