ಪಾಕ್ ಗೂಢಚಾರಿಣಿಗೆ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಭಾರತೀಯ ಸೈನಿಕರ ಬಂಧನ

Update: 2019-11-06 10:55 GMT

ಜೈಪುರ್, ನ.6: ಪಾಕಿಸ್ತಾನ ಮೂಲದ ಮಹಿಳಾ ಐಎಸ್‌ಐ ಏಜೆಂಟ್ ಒಬ್ಬರಿಗೆ ಮಹತ್ವದ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ಭಾರತೀಯ ಸೈನಿಕರನ್ನು ಜೋಧ್‌ ಪುರ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇಬ್ಬರು ಸೈನಿಕರು ತಾವು ಸೇವೆ ಸಲ್ಲಿಸುತ್ತಿದ್ದ ಪೋಖ್ರಾನ್‌ ನಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಗುಪ್ತಚರ ಅಧಿಕಾರಿಗಳು ಅವರನ್ನು ಬಂಧಿಸಿದರು.

ಪಾಕಿಸ್ತಾನಿ ಮಹಿಳೆಯ ಹನಿ ಟ್ರ್ಯಾಪ್ ಗೆ ಬಲಿಯಾಗಿ ಇಬ್ಬರೂ ಆಕೆಗೆ ಮಹತ್ವದ ಮಾಹಿತಿಯನ್ನು ವಾಟ್ಸ್ಯಾಪ್ ಮತ್ತು ಫೇಸ್‌ ಬುಕ್ ಮೂಲಕ  ರವಾನಿಸುತ್ತಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರನ್ನೂ ಜೈಪುರ್‌ ಗೆ ಕರೆದುಕೊಂಡು ಹೋಗಲಾಗಿದ್ದು ಅಲ್ಲಿ ಅವರನ್ನು ವಿಚಾರಣೆಗೆ ಗುರಿ ಪಡಿಸಲಾಗಿದೆ.

ಬಂಧಿತರಲ್ಲಿ ಒಬ್ಬಾತ ಮಧ್ಯಪ್ರದೇಶದವನಾಗಿದ್ದರೆ ಇನ್ನೊಬ್ಬಾತ ಅಸ್ಸಾಂ ರಾಜ್ಯದವನಾಗಿದ್ದಾನೆ. ಅವರನ್ನು ಲಾನ್ಸ್ ನಾಯಕ್ ರವಿ ವರ್ಮ ಹಾಗೂ ವಿಚಿತ್ರ ಬೊಹ್ರಾ ಎಂದು ಗುರುತಿಸಲಾಗಿದೆ.

ಅವರಿಂದ ಗೌಪ್ಯ ಮಾಹಿತಿಯನ್ನು ಪಡೆಯುತ್ತಿದ್ದ ಪಾಕಿಸ್ತಾನಿ ಮಹಿಳೆಯ ಮಾತು ಪಂಜಾಬಿ ಧಾಟಿಯಲ್ಲಿತ್ತೆನ್ನಲಾಗಿದ್ದು, ಆಕೆ  ವಿಒಐಪಿ ಸೇವೆ ಮೂಲಕ ಪಾಕಿಸ್ತಾನಿ ಸಂಖ್ಯೆಯಿಂದ ಕರೆ ಮಾಡುತ್ತಿದ್ದರೂ ಸೈನಿಕರ ಫೋನ್‌ ನಲ್ಲಿ ಅದು ಭಾರತೀಯ ಸಂಖ್ಯೆಯಂತೆ ಕಾಣುತ್ತಿತ್ತು. ಹಾಗಾಗಿ ಆಕೆ ಭಾರತೀಯಳೆಂದು ನಂಬಿ ರಾಜಸ್ಥಾನದಲ್ಲಿ ಸೇನೆಯ ಕುರಿತಾದ ಮಹತ್ವದ ಮಾಹಿತಿಯನ್ನು ಆಕೆಗೆ ನೀಡುತ್ತಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News