ಬಿಎಸ್‌ವೈ ವಿರುದ್ಧ ಆಪರೇಷನ್ ಕಮಲ ಆಡಿಯೊ ಪ್ರಕರಣ: ನ.28ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2019-11-07 15:39 GMT

ಬೆಂಗಳೂರು, ನ.7: ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಪರೇಷನ್ ಕಮಲ ಆಡಿಯೊ ಪ್ರಕರಣದ ವಿಚಾರಣೆಯನ್ನು ಕಲಬುರ್ಗಿ ಹೈಕೋರ್ಟ್ ನ.28ಕ್ಕೆ ಮುಂದೂಡಿದೆ.

ದೇವದುರ್ಗ ಪ್ರವಾಸಿ ಮಂದಿರದಲ್ಲಿ ಆಪರೇಶನ್ ಕಮಲದ ವಿಚಾರವಾಗಿ ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡಗೆ ಬಿಜೆಪಿ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಕರೆ ಮಾಡಿದ್ದ ಬಿಎಸ್‌ವೈ ಪಕ್ಷಕ್ಕೆ ಬಂದರೆ 10 ಕೋಟಿ ಹಣ ನೀಡುವುದಾಗಿ ದೂರವಾಣಿ ಕರೆ ಮಾಡಿ ತಿಳಿಸಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಗೆ ನ್ಯಾಯಪೀಠವು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವಿಗೆ ಆಗ್ರಹಿಸಿ ಶರಣಗೌಡ ಅವರು ಮನವಿ ಸಲ್ಲಿಸಿದ್ದಾರೆ. ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿತು. ಬಿಎಸ್‌ವೈ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News