ಸೌದಿ ಅರೇಬಿಯ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಟ್ವಿಟರ್ ಉದ್ಯೋಗಿಗಳು

Update: 2019-11-07 18:00 GMT

ವಾಶಿಂಗ್ಟನ್, ನ. 7: ಸಾಮಾಜಿಕ ಮಾಧ್ಯಮ ಟ್ವಿಟರ್‌ನ ಇಬ್ಬರು ಮಾಜಿ ಉದ್ಯೋಗಿಗಳು ಮತ್ತು ಓರ್ವ ಸೌದಿ ಅರೇಬಿಯದ ವ್ಯಕ್ತಿ ಸೌದಿ ಅರೇಬಿಯದ ಪರವಾಗಿ ಬೇಹುಗಾರಿಕೆ ನಡೆಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

ಈ ವ್ಯಕ್ತಿಗಳು ಟ್ವಿಟರ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ ಹಣಕ್ಕಾಗಿ ಸೌದಿ ಅರೇಬಿಯದ ಅಧಿಕಾರಿಗಳಿಗೆ ಮಾರುತ್ತಿದ್ದರು ಎಂದು ಬುಧವಾರ ಹೊರಿಸಲಾದ ಆರೋಪದಲ್ಲಿ ಹೇಳಲಾಗಿದೆ.

ಇಬ್ಬರು ಮಾಜಿ ಟ್ವಿಟರ್ ಉದ್ಯೋಗಿಗಳು ಸೌದಿ ಅರೇಬಿಯಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದರು. ಅವರು ಟ್ವಿಟರ್‌ನಲ್ಲಿರುವ ಸೌದಿ ಬಿನ್ನಮತೀಯರ ಖಾಸಗಿ ಸಂಗ್ರಹಿಸುತ್ತಿದ್ದರು ಎಂದು ಅಮೆರಿಕದ ಕಾನೂನು ಇಲಾಖೆ ಆರೋಪಿಸಿದೆ. ಸೌದಿ ಅರೇಬಿಯವು ಅಮೆರಿಕದಲ್ಲಿ ಗುಪ್ತಚರ ಏಜಂಟರನ್ನು ನೇಮಿಸಿದೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಈ ಪ್ರಕರಣದ ಓರ್ವ ಆರೋಪಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ನಿಕಟವರ್ತಿಯಾಗಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ಹೇಳುತ್ತವೆ. ಕಳೆದ ವರ್ಷ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದಾರೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಸಿಐಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News