ಜನರ ಸಬಲೀಕರಣ ನನ್ನ ಅತ್ಯಂತ ತೃಪ್ತಿದಾಯಕ ಪ್ರಯತ್ನಗಳಲ್ಲೊಂದು: ಪ್ರಧಾನಿ ಮೋದಿ

Update: 2019-11-08 17:18 GMT

ಹೊಸದಿಲ್ಲಿ,ನ.8: ಜನರ,ವಿಶೇಷವಾಗಿ ಮಹಿಳೆಯರ ಸಬಲೀಕರಣ ತನ್ನ ಅಧಿಕಾರಾವಧಿಯ ಅತ್ಯಂತ ತೃಪ್ತಿದಾಯಕ ಪ್ರಯತ್ನಗಳಲ್ಲೊಂದಾಗಿದೆ ಎಂದು ಶುಕ್ರವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ಎಲ್ಲ ಪ್ರದೇಶಗಳು, ಭಾಷೆಗಳು, ವಯೋಗುಂಪುಗಳು ಮತ್ತು ವೃತ್ತಿಗಳ ಜನರು ತನ್ನ ಸರಕಾರಕ್ಕೆ ನೀಡಿರುವ ಆದೇಶವು ಇತ್ತೀಚಿನ ದಶಕಗಳಲ್ಲೆಂದೂ ಕಂಡುಬಂದಿರಲಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಅಮೆರಿಕದ ಹೂಡಿಕೆ ನಿರ್ವಹಣೆ ಸಂಸ್ಥೆ ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್‌ನ ಸ್ಥಾಪಕ ರೇ ಡೇಲಿಯೊ ಅವರ ಟ್ವೀಟ್‌ಗಳಿಗೆ ಮೋದಿ ಪ್ರತಿಕ್ರಿಯಿಸುತ್ತಿದ್ದರು. ಮೋದಿ ವಿಶ್ವದಲ್ಲಿಯ ಅತ್ಯುತ್ತಮ ನಾಯಕರಲ್ಲೊಬ್ಬರಾಗಿದ್ದಾರೆ ಎಂದು ಡೇಲಿಯೊ ತನ್ನ ಟ್ವೀಟ್‌ನಲ್ಲಿ ಪ್ರಶಂಸಿಸಿದ್ದಾರೆ.

‘ಧ್ಯಾನ,ಜಗತ್ತು ಮತ್ತು ಭಾರತ ’ ಕುರಿತು ಮೋದಿಯವರೊಂದಿಗೆ ತನ್ನ ಕಿರು ಸಂದರ್ಶನದ ವೀಡಿಯೊವನ್ನೂ ಡೇಲಿಯೊ ಪೋಸ್ಟ್ ಮಾಡಿದ್ದಾರೆ.

‘ ಪ್ರಿಯ ಸ್ನೇಹಿತ ಡೇಲಿಯೊ,ಈ ಪ್ರಶಂಸೆಯ ನಂತರದ ಟ್ರೋಲ್‌ಗಳು ನಿಮ್ಮ ಧ್ಯಾನ ಕೌಶಲ್ಯವನ್ನು ಪರೀಕ್ಷಿಸಲು ನಿಮಗೆ ಅತ್ಯುತ್ತಮ ಅವಕಾಶವನ್ನು ಒದಗಿಸಲಿವೆ ’ ಎಂದೂ ಮೋದಿ ಲಘುಧಾಟಿಯಲ್ಲಿ ಟ್ವೀಟಿಸಿದ್ದಾರೆ.

‘ ಅಷ್ಟೊಂದು ಭಾರತೀಯರ,ವಿಶೇಷವಾಗಿ ಮಹಿಳೆಯರ ಸಬಲೀಕರಣವು ನನ್ನ ಅಧಿಕಾರಾವಧಿಯ ಅತ್ಯಂತ ತೃಪ್ತಿಕರ ಪ್ರಯತ್ನಗಳಲ್ಲೊಂದಾಗಿದೆ. ಇದರ ಹೆಗ್ಗಳಿಕೆ ಈ ಆಂದೋಲನವನ್ನು ತಮ್ಮದೇ ಎಂದು ಪರಿಗಣಿಸಿ,ಪರಿವರ್ತನೆಗೆ ವೇಗ ನೀಡಿದ ಜನರಿಗೆ ಸಲ್ಲುತ್ತದೆ ’ಎಂದೂ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News