ಐಐಟಿ ವಿದ್ಯಾರ್ಥಿನಿ ಆತ್ಮಹತ್ಯೆ: ಕಾರಣ ಏನು ಗೊತ್ತೇ?

Update: 2019-11-10 03:46 GMT

ಚೆನ್ನೈ, ನ.10: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಮದ್ರಾಸ್) ಕ್ಯಾಂಪಸ್ ಹಾಸ್ಟೆಲ್‌ನಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡು ಫಾತಿಮಾ ಲತೀಫ್ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾನವಿಕ ವಿಷಯದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಈಕೆ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಕೇರಳದ ಮೊಲ್ಲಂ ಮೂಲದ ವಿದ್ಯಾರ್ಥಿನಿ ಐಐಟಿ-ಎಂ ಕ್ಯಾಂಪಸ್‌ನ ಸರಯು ಹಾಸ್ಟೆಲ್‌ನ ಕೊಠಡಿ ಸಂಖ್ಯೆ 346ರಲ್ಲಿದ್ದಳು. ಶನಿವಾರ ಬೆಳಗ್ಗೆ 11:30ರ ವರೆಗೂ ಫಾತಿಮಾ ಕೊಠಡಿಯ ಬಾಗಿಲು ಮುಚ್ಚಿತ್ತು. ಸ್ನೇಹಿತರು ಬಾಗಿಲು ಮುರಿದು ಒಳಹೊಕ್ಕು ನೋಡಿದಾಗ ಫ್ಯಾನ್‌ನಲ್ಲಿ ಫಾತಿಮಾ ಮೃತದೇಹ ನೇತಾಡುತ್ತಿತ್ತು ಎಂದು ಕೊತ್ತುಪುರಂ ಪೊಲೀಸರು ಹೇಳಿದ್ದಾರೆ.

ಫಾತಿಮಾ ತಾಯಿ ಸಾಜಿತಾ ಲತೀಫ್ ಶುಕ್ರವಾರದಿಂದಲೇ ಮಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ವಿಫಲ ಯತ್ನ ನಡೆಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

"ಇದೇ ಮೊದಲ ಬಾರಿಗೆ ಫಾತಿಮಾ ಕುಟುಂಬದಿಂದ ಹೊರಗಿದ್ದಳು. ಇತ್ತೀಚೆಗೆ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಳು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News