ಬೆಂಗಳೂರು: ಪ್ರಾಂಕ್ ಮಾಡಲು ಹೋಗಿ ಬಂಧನಕ್ಕೊಳಗಾದ 7 'ದೆವ್ವ'ಗಳು !

Update: 2019-11-11 14:35 GMT

ಬೆಂಗಳೂರು, ನ.11: ದೆವ್ವದ ವೇಷತೊಟ್ಟು ಜನರನ್ನು ಹೆದರಿಸಿ ಪ್ರಾಂಕ್ ಮಾಡುತ್ತಿದ್ದ 7 ಜನರನ್ನು ಇಲ್ಲಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಆರ್.ಟಿ.ನಗರದ ಶಾನ್ ಮಲ್ಲಿಕ್(20), ನವೀದ್(20), ಸಜಿಲ್ ಮುಹಮ್ಮದ್(21), ಸಾಕಿಬ್(20), ಸಯ್ಯದ್ ನಬೀಲ್(20) ಹಾಗೂ ಯೂಸುಫ್ ಅಹಮದ್(20), ನಾಗವಾರದ ಮುಹಮ್ಮದ್ ಅಕ್ಯೂಬ್(20)ರನ್ನು ಪೊಲೀಸರು ಬಂಧಿಸಿದ್ದಾರೆ.

ಇವರ ತಂಡವು ಗುಂಪು ಕಟ್ಟಿಕೊಂಡು ಬೆಳಗಿನ ವೇಳೆ 2.30 ರ ಸುಮಾರಿನಲ್ಲಿ ಶರೀಫ್ ನಗರದ ಬಳಿ ದೆವ್ವದ ವೇಷ ತೊಟ್ಟುಕೊಂಡು ರಸ್ತೆಯಲ್ಲಿ ಹೋಗುವ ವಾಹನ ಅಡ್ಡಗಟ್ಟಿ ಸವಾರರಿಗೆ ಭಯಾನಕ ರೀತಿಯಲ್ಲಿ ಬೆದರಿಸುತ್ತಿದ್ದರು.

ಸೋಮವಾರ ಮುಂಜಾನೆ ಇದೇ ಮಾರ್ಗದಲ್ಲಿ ಪೊಲೀಸರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಏಳು ಮಂದಿಯನ್ನು ಬಂಧಿಸಿ, ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News