ಚುನಾವಣಾ ಪ್ರಚಾರದಲ್ಲಿ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಗಾಯಿರಲಿ: ಚು.ಆಯೋಗಕ್ಕೆ ಎನ್‌ಜಿಟಿ ನಿರ್ದೇಶ

Update: 2019-11-11 15:38 GMT
ಫೋಟೊ: PTI

ಹೊಸದಿಲ್ಲಿ,ನ.11: ಚುನಾವಣೆಗಳ ಸಂದರ್ಭ ಪ್ಲಾಸ್ಟಿಕ್‌ನ,ವಿಶೇಷವಾಗಿ ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳ ಬಳಕೆಯ ವಿರುದ್ಧ ಸಲಹೆಗಳ ಪಾಲನೆಯ ಮೇಲೆ ನಿಗಾ ಇರಿಸುವಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ)ವು ಚುನಾವಣಾ ಆಯೋಗ ಮತ್ತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶ ನೀಡಿದೆ.

ಚುನಾವಣಾ ಪ್ರಚಾರಗಳ ಸಂದರ್ಭ ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯ ಆಯ್ಕೆಗಳನ್ನು ಬಳಸಲು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಚುನಾವಣಾಧಿಕಾರಿಗಳಿಗೆ ತಾನು ಸೂಚಿಸಿರುವುದಾಗಿ ಪರಿಸರ ಮತ್ತು ಅರಣ್ಯ ಸಚಿವಾಲಯವು ತಿಳಿಸಿದ ಬಳಿಕ ಎನ್‌ಜಿಟಿಯ ಈ ನಿರ್ದೇಶ ಹೊರಬಿದ್ದಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬ್ಯಾನರ್‌ಗಳು ಮತ್ತು ಹೋರ್ಡಿಂಗ್ ಸೇರಿದಂತೆ ಪಿವಿಸಿ,ಸಿಂಥೆಟಿಕ್ ಪ್ಲಾಸ್ಟಿಕ್ ಪಾಲಿಮರ್ ಹಾಗೂ ಕ್ಲೋರಿನೇಟೆಡ್ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ರಾಜ್ಯಗಳಿಗೆ ನಿರ್ದೇಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಗ ಸಂಬಂಧಿಸಿದಂತೆ ಎನ್‌ಜಿಟಿ ಅಧ್ಯಕ್ಷ ಆದರ್ಶ ಕುಮಾರ ಗೋಯೆಲ್ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News