ಸೆಪ್ಟೆಂಬರ್‌ನಲ್ಲಿ ಶೆ.4.3ರಷ್ಟು ಕುಸಿದ ಕೈಗಾರಿಕಾ ಉತ್ಪಾದನೆ

Update: 2019-11-11 16:00 GMT

ಹೊಸದಿಲ್ಲಿ,ನ.11: ದೇಶದ ಆರ್ಥಿಕ ಹಿಂಜರಿತವು ಇನ್ನಷ್ಟು ತೀವ್ರಗೊಂಡಿದ್ದು, ಕೈಗಾರಿಕಾ ಉತ್ಪಾದನೆ ಸೂಚಿ (ಐಐಪಿ)ಯ ಆಧಾರದಲ್ಲಿ ಅಳೆಯಲಾಗುವ ಕೈಗಾರಿಕಾ ಉತ್ಪಾದನೆ ಸೆಪ್ಟೆಂಬರ್‌ನಲ್ಲಿ ಸತತ ಎರಡನೇ ತಿಂಗಳಿಗೆ ಕುಸಿತವನ್ನು ದಾಖಲಿಸಿದೆ. ಆಗಸ್ಟ್‌ನಲ್ಲಿ ಶೇ.1.1ರಷ್ಟು ಕುಸಿದಿದ್ದ ಐಐಪಿ ಸೆಪ್ಟೆಂಬರ್‌ನಲ್ಲಿ ಶೇ.4.3ರಷ್ಟು ಇಳಿಕೆಯಾಗಿದೆ. 2018,ಸೆಪ್ಟೆಂಬರ್‌ನಲ್ಲಿ ಐಐಪಿ ಶೇ.4.6ರಷ್ಟು ಏರಿಕೆಯನ್ನು ಕಂಡಿತ್ತು.

ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 2019 ಸೆಪ್ಟೆಂಬರ್‌ನಲ್ಲಿ ತಯಾರಿಕೆ ಕ್ಷೇತ್ರದಲ್ಲಿಯ 23 ಕೈಗಾರಿಕಾ ಗುಂಪುಗಳ ಪೈಕಿ 17 ಋಣಾತ್ಮಕ ಬೆಳವಣಿಗೆಯನ್ನು ತೋರಿಸಿವೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

 ರಾಯ್ಟರ್ಸ್ ಸುದ್ದಿಸಂಸ್ಥೆಯು ನಡೆಸಿದ್ದ ಸಮೀಕ್ಷೆಯಲ್ಲಿ ಸೆಪ್ಟೆಂಬರ್ ತಿಂಗಳಿಗೆ ಕೈಗಾರಿಕಾ ಉತ್ಪಾದನೆ ಶೇ.2ರಷ್ಟು ಕುಸಿಯಲಿದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು.

ಮೋಟರ್ ವಾಹನಗಳು ಸೇರಿದಂತೆ ತಯಾರಿಕೆ ಕ್ಷೇತ್ರದಲ್ಲಿ ಸೆಪ್ಟೆಂಬರ್ ತಿಂಗಳಿಗೆ ಶೇ.3.9ರಷ್ಟು ಕುಸಿತವುಂಟಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.4.8ರಷ್ಟು ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News