ಮನೆ ಮುಂದೆ ಬೊಗಳುತ್ತಿದ್ದ ನಾಯಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿದ ವ್ಯಕ್ತಿ

Update: 2019-11-11 18:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.11: ಒಂದೇ ಸಮನೆ ಬೊಗಳುತ್ತಿದ್ದ ನಾಯಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿರುವ ಘಟನೆ ಇಲ್ಲಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನೆ ಮುಂದೆ ಬೊಗಳುತ್ತಿದ್ದ ನಾಯಿಯ ವರ್ತನೆಯಿಂದ ರೋಸಿಹೋದ ವ್ಯಕ್ತಿಯೊಬ್ಬರು ಏರ್‌ಗನ್‌ನಿಂದ ನಾಯಿಗೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ನಾಯಿಯ ದೇಹದೊಳಗೆ ಮೂರು ಗುಂಡುಗಳು ಹೊಕ್ಕಿವೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ನಾಯಿಯನ್ನು ಜಯನಗರ ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವೈದ್ಯರು ನಾಯಿಯನ್ನು ಪರೀಕ್ಷಿಸಿ ದೇಹದೊಳಗೆ ಹೊಕ್ಕಿದ್ದ ಗುಂಡನ್ನು ಹೊರತೆಗೆದು ಚಿಕಿತ್ಸೆ ನೀಡಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News