ವಿಚಾರಣೆಗೆ ಹಾಜರಾಗಲು ಸಂಸದ ಶಶಿ ತರೂರ್ ಗೆ ನ್ಯಾಯಾಲಯದ ವಾರಂಟ್

Update: 2019-11-12 07:50 GMT

ಹೊಸದಿಲ್ಲಿ, ನ.12: ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಸಲ್ಲಿಸಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ದಿಲ್ಲಿಯ  ನ್ಯಾಯಾಲಯ ಮಂಗಳವಾರ ವಾರಂಟ್ ಹೊರಡಿಸಿದೆ.

ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಪ್ರಕರಣ ದಾಖಲಿಸಲಾಗಿದೆ. ಮಾಜಿ ಸಚಿವರು ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯ ಇಂದು  ವಾರಂಟ್ ಹೊರಡಿಸಿದೆ ಎಂದು ಎಎನ್‌ಐ ವರದಿ ಮಾಡಿದೆ

"ದಿಲ್ಲಿಯ ರೋಸ್  ಅವೆನ್ಯೂ ನ್ಯಾಯಾಲಯವು ಕಾಂಗ್ರೆಸ್ ಸಂಸದ ಶಶಿ ತರೂರ್ ಮಾನನಷ್ಟ ಪ್ರಕರಣದಲ್ಲಿ ಹಾಜರಾಗದ ಕಾರಣ ಅವರಿಗೆ ಜಾಮೀನು ವಾರಂಟ್ ಹೊರಡಿಸಿದೆ. ಪ್ರಧಾನಿ ಮೋದಿಯವರ ಬಗ್ಗೆ ತರೂರ್ ಅವರ ‘ಚೇಲಿಂಗ್ ಆನ್ ಶಿವ್ಲಿಂಗ್’ ಹೇಳಿಕೆ ಕುರಿತು ಬಿಜೆಪಿ ನಾಯಕ ರಾಜೀವ್ ಬಬ್ಬರ್ ಈ ಪ್ರಕರಣ ದಾಖಲಿಸಿದ್ದಾರೆ, ”ಎಎನ್‌ಐ ಟ್ವೀಟ್‌ನಲ್ಲಿ ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಶಶಿ ತರೂರ್ ಅವರು ಉತ್ಸವವೊಂದರಲ್ಲಿ ಪ್ರಧಾನಿ ನರೇಂದ್ರ ಮೊದಿ ಬಗ್ಗೆ ಮಾನಹಾನಿಕರ ಹೇಳಿ ನೀಡಿದ್ದರು  ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ದೆಹಲಿ ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಮಾಜಿ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News