ಭಾರತದಲ್ಲಿ ಕಂಪೆನಿಯ ಭವಿಷ್ಯ ಗಂಭೀರ ಸ್ಥಿತಿಯಲ್ಲಿದೆ: ವೊಡಾಫೋನ್ ಸಿಇಒ

Update: 2019-11-12 10:32 GMT
Photo: thetimes.co.uk

ಹೊಸದಿಲ್ಲಿ: ಟೆಲಿಕಾಂ ಆಪರೇಟರ್ ವೊಡಾಫೋನ್ ಸಂಸ್ಥೆಯ "ಭಾರತದಲ್ಲಿನ ಭವಿಷ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ಹೇಳುವುದು ನ್ಯಾಯೋಚಿತವಾಗಬಹುದು'' ಎಂದು  ಬ್ರಿಟಿಷ್ ಮೂಲದ ಸಂಸ್ಥೆಯ ಸಿಇಒ ನಿಕ್ ರೀಡ್ ಹೇಳಿದ್ದಾರೆ.

ವೊಡಾಫೋನ್ ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದು ಇಲ್ಲಿ ಇನ್ನಷ್ಟು ಬೆಳೆಯುವ ಅವಕಾಶವಿದೆ ಎಂದು ನಂಬಿದೆ ಎಂದು ಅವರು ಹೇಳಿದರು. ಭಾರತದಲ್ಲಿ ನಿಯಂತ್ರಣ ಹಾಗೂ ನಿಯಮಗಳ ಕುರಿತಂತೆ ಸೂಕ್ತ ಹಾಗೂ ಪೂರಕ ವಾತಾವರಣ ಬೇಕು ಹಾಗೂ ದರಗಳು ಸುಸ್ಥಿರವಾಗಿರಬೇಕು ಎಂದು ಅವರು ಹೇಳಿದರು.

ಟೆಲಿಕಾಂ ಆದಾಯ ಲೆಕ್ಕಾಚಾರ ನಡೆಸಲು ಸರಕಾರ ಅನುಸರಿಸುವ ವಿಧಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ  ಭಾರತದಲ್ಲಿ ಐಡಿಯಾ ಸೆಲ್ಯುಲರ್ ಜತೆ ಸೇರಿ ವೊಡಾಫೋನ್-ಐಡಿಯಾ ಆಗಿರುವ ಕಂಪೆನಿ ರೂ 40,000 ಕೋಟಿ ಬಾಕಿ ಪಾವತಿಸುವ ಅನಿವಾರ್ಯತೆ ಎದುರಿಸುತ್ತಿದೆ.

ಭಾರತದಲ್ಲಿ ಉಳಿಯಲು ಕಂಪೆನಿ ಬಯಸಿದೆ ಹಾಗೂ ಈಗಿನ ಸವಾಲುಭರಿತ ವಾತಾವರಣದಲ್ಲಿ ಸೂಕ್ತ  ಬೆಂಬಲಕ್ಕಾಗಿ ಸರಕಾರವನ್ನು ಎದುರು ನೋಡುತ್ತಿದೆ ಎಂದು ಕಳೆದ ತಿಂಗಳು ಸಂಸ್ಥೆ ಹೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News