ಭವಿಷ್ಯದ ತಾರೆ: ಭಾರತೀಯ ಅಥ್ಲೀಟ್‌ಗೆ ಟೈಮ್ ಗೌರವ

Update: 2019-11-14 04:35 GMT

ಹೊಸದಿಲ್ಲಿ, ನ.14: ಭಾರತದ ಭರವಸೆಯ ಅಥ್ಲೀಟ್ ದ್ಯುತಿ ಚಂದ್, ಟೈಮ್ ನಿಯತಕಾಲಿಕದ ಮೊಟ್ಟಮೊದಲ ಟೈಮ್ 100 ನೆಕ್ಸ್ಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್- 100 ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯ ವಿಸ್ತರಿತ ಅವತರಣಿಕೆ ಇದಾಗಿದ್ದು, ಭವಿಷ್ಯದ ಸಂಭಾವ್ಯ 100 ಪ್ರಭಾವಿ ವ್ಯಕ್ತಿಗಳು ಇಲ್ಲಿ ಸ್ಥಾನ ಪಡೆದಿದ್ದಾರೆ.

ವ್ಯಾಪಾರ, ಮನೋರಂಜನೆ, ಕ್ರೀಡೆ, ರಾಜಕೀಯ, ಆರೋಗ್ಯ, ವಿಜ್ಞಾನ, ಹೋರಾಟ ಮತ್ತಿತರ ಕ್ಷೇತ್ರಗಳ ಭವಿಷ್ಯವನ್ನು ರೂಪಿಸಬಲ್ಲ 100 ಮಂದಿ ಉದಯೋನ್ಮುಖರನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ತಮ್ಮ ಹೋರಾಟದ ಹಾದಿಯನ್ನು ಗೌರವಿಸಿದ್ದಕ್ಕಾಗಿ ಅಭಿಮಾನಿಗಳು ಹಾಗೂ ಟೈಮ್ ನಿಯತಕಾಲಿಕಕ್ಕೆ ದ್ಯುತಿ ಚಂದ್ ಕೃತಜ್ಞತೆ ಹೇಳಿದ್ದಾರೆ.

"ಟೈಮ್‌ನಿಂದ ಈ ಗೌರವ ಸ್ವೀಕರಿಸಲು ಅತೀವ ಸಂತಸವಾಗುತ್ತಿದೆ. ಲಿಂಗ ಸಮಾನತೆಯಲ್ಲಿ ನನಗೆ ನಂಬಿಕೆ ಇದೆ. ಕ್ರೀಡೆ ಹಾಗೂ ವಿಸ್ತೃತವಾಗಿ ಸಮಾಜದಲ್ಲಿ ಯುವ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಿದ್ದೇನೆ" ಎಂದು ಚಂದ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News