ಬೆಂಗಳೂರು: ರನ್-ವೇಯಿಂದ ಜಾರಿ ಹುಲ್ಲು ತುಂಬಿದ್ದ ಜಾಗದಿಂದ ವಿಮಾನ ಟೇಕ್ ಆಫ್

Update: 2019-11-14 11:02 GMT
Photo: www.ndtv.com

ಬೆಂಗಳೂರು: 180 ಪ್ರಯಾಣಿಕರನ್ನು ಹೊತ್ತು ನಾಗ್ಪುರದಿಂದ ಆಗಮಿಸಿದ ಗೋ ಏರ್ ಸಂಸ್ಥೆಯ ಏರ್ ಬಸ್ ಎ320 ವಿಮಾನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಇಳಿಯಬೇಕೆನ್ನುವಷ್ಟರಲ್ಲಿ ಅದು ರನ್-ವೇಯಿಂದ ಜಾರಿ ಹತ್ತಿರದ ಹುಲ್ಲು ತುಂಬಿದ್ದ ಜಾಗವನ್ನು ಪ್ರವೇಶಿಸಿತ್ತು.

ಈ ಸಂದರ್ಭ ಪೈಲಟ್ ವಿಮಾನದ ವೇಗವನ್ನು ಹೆಚ್ಚಿಸಿದ ಪರಿಣಾಮ ಅದು ಅಲ್ಲಿಂದ ಸುರಕ್ಷಿತವಾಗಿ ಟೇಕ್ ಆಫ್ ಆಗಿ ಹೈದರಾಬಾದ್‍ನತ್ತ ಸಾಗಿದ ಘಟನೆ ವರದಿಯಾಗಿದೆ.

ಸೋಮವಾರ ನಡೆದ ಈ  ಘಟನೆಯ ಕುರಿತಂತೆ ಡಿಜಿಸಿಎ ತನಿಖೆಗೆ ಆದೇಶಿಸಿದೆ. ವಿಮಾನದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದರೂ ವಿಮಾನದ ಸಿಬ್ಬಂದಿಗಳೆಲ್ಲರನ್ನೂ ಕರ್ತವ್ಯದಿಂದ ತೆಗೆದು ಹಾಕಲಾಗಿದ್ದು ಪೈಲಟ್‍ ನನ್ನು ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News