ರಫೇಲ್ ಒಪ್ಪಂದ ಕುರಿತು ಸುಪ್ರೀಂ ತೀರ್ಪು: ಮಾಜಿ ವಾಯುಪಡೆ ಮುಖ್ಯಸ್ಥ ಧನೋವಾ ಹೇಳಿದ್ದೇನು?

Update: 2019-11-14 14:28 GMT
ಫೋಟೋ: IANS

ಹೊಸದಿಲ್ಲಿ, ನ.13: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನರೇಂದ್ರ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತನ್ನ ಹಿಂದಿನ ತೀರ್ಪನ್ನು ಎತ್ತಿ ಹಿಡಿದಿರುವ ಸರ್ವೋಚ್ಚ ನ್ಯಾಯಾಲಯದ ಗುರುವಾರದ ನಿರ್ಧಾರವನ್ನು ಸ್ವಾಗತಿಸಿದ ಭಾರತೀಯ ವಾಯುಪಡೆ (ಐಎಎಫ್)ಯ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ಅವರು,‘ಇದು ನಮ್ಮ ನಿಲುವನ್ನು ಸಮರ್ಥಿಸಿದೆಯೆಂದು ಭಾವಿಸಿದ್ದೇನೆ ’ಎಂದು ಹೇಳಿದರು.

‘ ಸರ್ವೋಚ್ಚ ನ್ಯಾಯಾಲಯವು ಉತ್ತಮ ತೀರ್ಪನ್ನು ನೀಡಿದೆ ಎಂದು 2018,ಡಿಸೆಂಬರ್‌ನಲ್ಲಿ ಹೇಳಿಕೆಯೊಂದರಲ್ಲಿ ನಾನು ತಿಳಿಸಿದ್ದೆ. ನಾನು ರಾಜಕೀಯ ಮಾಡುತ್ತಿದ್ದೇನೆ ಎಂದು ಕೆಲವರು ಆಗ ಟೀಕಿಸಿದ್ದರು ಮತ್ತು ಅದು ಸಂಪೂರ್ಣ ತಪ್ಪಾಗಿತ್ತು ’ಎಂದ ಧನೋವಾ,ಇಂತಹ ವಿಷಯಗಳನ್ನು ರಾಜಕೀಯ ಲಾಭಗಳಿಕೆಗಾಗಿ ಬಳಸಿಕೊಳ್ಳಬಾರದು. ವಿಷಯವೀಗ ಅಂತ್ಯಗೊಂಡಿದೆ ಎಂದು ಆಶಿಸಿದ್ದೇನೆ ಎಂದರು.

‘ ಐಎಎಫ್ ರಫೇಲ್ ಒಪ್ಪಂದವನ್ನು ಅದರ ಅರ್ಹತೆಯ ಆಧಾರದಲ್ಲಿ ಬೆಂಬಲಿಸಿತ್ತು. ದರಗಳ ಕುರಿತು ಮಾತುಕತೆಗಳನ್ನು ಆಗ ಪಡೆಯ ಉಪ ಮುಖ್ಯಸ್ಥರಾಗಿದ್ದ ಈಗಿನ ಮುಖ್ಯಸ್ಥರು ನಡೆಸಿದ್ದರು.ಒಪ್ಪಂದವು ಅತ್ಯಂತ ವಿಶ್ವಾಸಪೂರ್ಣವಾಗಿದೆ ಎನ್ನುವುದು ನಮಗೆ ಸಂಪೂರ್ಣವಾಗಿ ಖಚಿತವಾಗಿತ್ತು ’ಎಂದರು.

ಯುದ್ಧ ವಿಮಾನಗಳ ಸ್ಕ್ವಾಡ್ರನ್‌ಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಮಹತ್ವದ್ದಾಗಿವೆ ಎಂದೂ ಧನೋವಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News