11ನೇ ‘ಬ್ರಿಕ್ಸ್’ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಬ್ರೆಝಿಲ್: ಮೋದಿ-ಜಿನ್‌ಪಿಂಗ್ ಸಭೆ

Update: 2019-11-14 16:14 GMT

ಬ್ರೆಸೀಲಿಯ (ಬ್ರೆಝಿಲ್), ನ. 14: ಪ್ರಧಾನಿ ನರೇಂದ್ರ ಮೋದಿ ಬುಧವಾರ ಬ್ರೆಝಿಲ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯವನ್ನು ನೀಡುವುದಕ್ಕಾಗಿ ವ್ಯಾಪಾರ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ನಿಕಟ ಸಂಪರ್ಕವನ್ನು ಕಾಯ್ದುಕೊಂಡು ಬರಲು ಮಾತುಕತೆಯಲ್ಲಿ ಉಭಯ ದೇಶಗಳು ಒಪ್ಪಿವೆ.

ಇಲ್ಲಿ ನಡೆಯುತ್ತಿರುವ 11ನೇ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನು ಒಳಗೊಂಡ ಗುಂಪು) ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಈ ಸಭೆ ನಡೆಯಿತು.

ನನ್ನ ಮತ್ತು ಜಿನ್‌ಪಿಂಗ್ ನಡುವೆ ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಎರಡನೇ ಔಪಚಾರಿಕ ಶೃಂಗ ಸಮ್ಮೇಳನದ ಬಳಿಕ, ದ್ವಿಪಕ್ಷೀಯ ಸಂಬಂಧಕ್ಕೆ ‘ನೂತನ ದಿಕ್ಕು ಮತ್ತು ನೂತನ ಚೈತನ್ಯ’ ಲಭಿಸಿದೆ ಎಂದು ಸಭೆಯಲ್ಲಿ ಮೋದಿ ಹೇಳಿದರು.

‘‘ಬ್ರೆಝಿಲ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಫಲಪ್ರದ ಸಭೆ ನಡೆಯಿತು. ಉಭಯ ನಾಯಕರು ಪ್ರಮುಖವಾಗಿ ವ್ಯಾಪಾರ ಮತ್ತು ಹೂಡಿಕೆಗಳ ಬಗ್ಗೆ ಚರ್ಚಿಸಿದರು’’ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News