ಬೆಂಗಳೂರು: ಕಿಡ್ಸ್ ಮ್ಯಾರಥಾನ್‌ಗೆ ಪಿ.ಟಿ. ಉಷಾ ಚಾಲನೆ

Update: 2019-11-14 17:52 GMT

ಬೆಂಗಳೂರು, ನ.14: ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ದನಿಗೆ ಬೆಂಬಲ ಒದಗಿಸುವ ವೇದಿಕೆಯಾದ ಲಿಟ್ಲ್ ವಿಲೇನಿಯಮ್ ಕಿಡ್ಸ್ ಮ್ಯಾರಥಾನ್‌ಗೆ ಕ್ರೀಡಾಪಟು ಪಿ.ಟಿ. ಉಷಾ ಚಾಲನೆ ನೀಡಿದರು.

ಬಸವನಗುಡಿಯಲ್ಲಿರುವ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ಲಿಟ್ಲ್ ಮಿಲೇನಿಯಂ ಸಂಸ್ಥೆ ವತಿಯಿಂದ ಸುಶಿಕ್ಷಿತ ಶೈಶವಾವಸ್ಥೆಯನ್ನು ಬಲಗೊಳಿಸುವ ಮತ್ತು ವೃದ್ಧಿಸುವ ಉದ್ದೇಶದಿಂದ 4-8ವರ್ಷ ವಯೋಮಿತಿಯೊಳಗಿನ ಮಕ್ಕಳಿಗಾಗಿ ಕಿಡ್ಸ್ ಮ್ಯಾರಥಾನ್ ನಡೆಯಿತು. ಇದರಲ್ಲಿ 4-8ವರ್ಷ ವಯೋಮಿತಿಯೊಳಗಿನ ಸುಮಾರು 2 ಸಾವಿರ ಮಕ್ಕಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮೇಲ್ವಿಚಾರಕಿ ರಮಣ ಬಜಾಜ್, ದೇಶದ 150 ನಗರಗಳಲ್ಲಿರುವ 750 ಪ್ರೀಸ್ಕೂಲಿನ 1,30 ಲಕ್ಷ ಮಕ್ಕಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಂಸ್ಥೆಯು ಮಕ್ಕಳಿಗೆ ಶಿಕ್ಷಣ ಒದಗಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಮಕ್ಕಳ ದೌರ್ಜನ್ಯದ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಅನುಸರಿಸುವ ಲಿಟ್ಲ್ ವಿಲೇನಿಯಮ್ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಹಲವು ರಾಜ್ಯದಲ್ಲಿ ಇದೆ. ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಅಸ್ತಿತ್ವ ಹೊಂದಿದ್ದು, ಸಂಸ್ಥೆಯ 200 ಪ್ರೀಸ್ಕೂಲ್‌ಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News