ಗ್ರಾಹಕರು ಮಾಡುವ ಖರ್ಚು ನಾಲ್ಕು ದಶಕಗಳಲ್ಲಿ ಮೊದಲ ಬಾರಿ ಶೇ 8.8ರಷ್ಟು ಇಳಿಕೆ

Update: 2019-11-15 09:49 GMT
Photo: DIPTENDU DUTTA VIA GETTY IMAGES

ಹೊಸದಿಲ್ಲಿ: ಗ್ರಾಹಕರು ಮಾಡುವ ಖರ್ಚು ಕಳೆದ ನಾಲ್ಕು ದಶಕದಲ್ಲಿಯೇ ಮೊದಲ ಬಾರಿಗೆ 2017-18ರಲ್ಲಿ  ಶೇ 8.8ರಷ್ಟು ಇಳಿಕೆ ಕಂಡಿದೆ ಎಂದು ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಸಮೀಕ್ಷೆ ತಿಳಿಸಿದೆಯೆಂದು Business Standard ವರದಿ ಮಾಡಿದೆ.

ಈ ಸಮೀಕ್ಷಾ ವರದಿ ಜೂನ್ 19, 2019ರಂದು ಬಿಡುಗಡೆಗೊಳ್ಳಲು ಅನುಮೋದನೆ ಪಡೆದಿದ್ದರೂ ವರದಿಯಲ್ಲಿನ ವಿವರಗಳು 'ಪ್ರತಿಕೂಲ'ವಾಗಿದ್ದರಿಂದ ಅದನ್ನು ತಡೆಹಿಡಿಯಲಾಗಿತ್ತೆಂದು Business Standard ವರದಿ ಹೇಳಿದೆ.

2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಸ್ವಲ್ಪ ಸಮಯದ ನಂತರ ಜಿಎಸ್ಟಿ ಜಾರಿ ಸಮಯದಲ್ಲಿಯೇ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು.  ಹೆಚ್ಚು ಆತಂಕಕಾರಿ ವಿಚಾರವೆಂದರೆ ಆಹಾರಕ್ಕಾಗಿ ಮಾಡುವ ಖರ್ಚೂ ಕಡಿಮೆಯಾಗಿತ್ತು ಎಂದು ವರದಿ ತಿಳಿಸಿದೆ. ಸರಕಾರ ಈ ಸಮೀಕ್ಷೆಯ ಅಂಕಿಅಂಶಗಳನ್ನು ಪರಾಮರ್ಶಿಸಲು ಸಮಿತಿಯೊಂದನ್ನು ರಚಿಸಿದ್ದು ಈ ಸಮಿತಿ ಕೂಡ ವರದಿಯಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿಸಿತ್ತು ಎಂದು Business Standard ವರದಿ ಹೇಳಿದೆ.

ಅದೇ ಸಮಯ ಆರು ವರ್ಷಗಳ ಅವಧಿಯಲ್ಲಿ ನಗರ ಪ್ರದೇಶದ ಗ್ರಾಹಕರು ಮಾಡುವ ಖರ್ಚು ಶೇ. 2ರಷ್ಟು ಏರಿಕೆಯಾಗಿದೆ ಎಂದೂ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News