​ಅಯೋಧ್ಯೆ ತೀರ್ಪು: ಖ್ಯಾತ ನ್ಯಾಯಶಾಸ್ತ್ರಜ್ಞ ತಾಹೀರ್ ಮಹಮ್ಮೂದ್ ಹೇಳಿದ್ದೇನು ?

Update: 2019-11-16 03:28 GMT
ಫೋಟೊ : livelaw.in

ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಜಾಗದಿಂದ ದೂರದ ಪ್ರದೇಶದಲ್ಲಿ ವಕ್ಫ್‌ಬೋರ್ಡ್, ನಿವೇಶನ ಪಡೆದು ಅದರಲ್ಲಿ ಶಾಲೆ ಅಥವಾ ಅನಾಥಾಶ್ರಮ ಸ್ಥಾಪಿಸಬೇಕು ಎಂದು ಖ್ಯಾತ ನ್ಯಾಯಶಾಸ್ತ್ರಜ್ಞ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ತಾಹೀರ್ ಮಹಮ್ಮೂದ್ ಸಲಹೆ ಮಾಡಿದ್ದಾರೆ.

"ಸುಪ್ರೀಂಕೋರ್ಟ್ ಅತ್ಯಂತ ಸೂಕ್ಷ್ಮ ವಿಚಾರವನ್ನು ಇತ್ಯರ್ಥಪಡಿಸುವ ದೊಡ್ಡ ಸವಾಲು ಹೊಂದಿತ್ತು. ಕಟ್ಟುನಿಟ್ಟಾಗಿ ಕಾನೂನಾತ್ಮಕವಾಗಿ ನೋಡಿದರೆ ಖಂಡಿತವಾಗಿಯೂ ಸುಪ್ರೀಂ ತೀರ್ಪಿನಲ್ಲಿ ಕೆಲ ಲೋಪಗಳಿವೆ. ಆದರೆ ಕೇವಲ ಕಾನೂನಾತ್ಮಕವಾಗಿ ಈ ಪ್ರಕರಣವನ್ನು ಪರಿಗಣಿಸದೇ, ಕಾನೂನೇತರ ಅಂಶಗಳಿಗೂ ಒತ್ತು ನೀಡಬೇಕಾದ ಅನಿವಾರ್ಯತೆ ಸುಪ್ರೀಂಕೋರ್ಟ್‌ಗೆ ಇತ್ತು ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ" ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ತೀರ್ಪಿನ ಪರಾಮರ್ಶೆಗೆ ಮೇಲ್ಮನವಿ ಸಲ್ಲಿಸುವುದರಿಂದ ಯಾವ ಪ್ರಯೋಜನವೂ ಆಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಸೀದಿಗೆ ನೀಡಲು ಉದ್ದೇಶಿಸಿರುವ ಜಾಗವನ್ನು ಪಡೆಯಬೇಕೇ ಬೇಡವೇ ಎಂಬ ಚರ್ಚೆ ಬಗ್ಗೆ ಗಮನ ಸೆಳೆದಾಗ, "ಭೂಮಿ ಸ್ವೀಕರಿಸದಿರುವುದೇ ಉತ್ತಮ. ಒಂದು ವೇಳೆ ಪಡೆದಲ್ಲಿ, ಮಂಡಳಿ ಈ ಜಮೀನನ್ನು ವಿವಾದಿತ ಭೂಮಿಯಿಂದ ದೂರದ ಪ್ರದೇಶದಲ್ಲಿ ಪಡೆದು ಮಸೀದಿಯ ಬದಲು ಶಾಲೆ, ಅನಾಥಾಶ್ರಮ ಅಥವಾ ವೃದ್ಧಾಪ್ಯ ಗೃಹ ನಿರ್ಮಿಸುವುದು ಒಳ್ಳೆಯದು" ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News