"ನೀವು ಅವಮಾನಕಾರಿ, ಹೇಡಿತನದ ಪರಂಪರೆಯನ್ನು ಬಿಟ್ಟು ಹೋಗಿದ್ದೀರಿ"

Update: 2019-11-19 07:36 GMT

ಮುಂಬೈ: ಬಾಲಿವುಡ್ ಗಾಯಕ  ಹಾಗೂ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ತಮ್ಮ ಇತ್ತೀಚಿಗಿನ ಟ್ವೀಟ್ ನಲ್ಲಿ ಮಾಜಿ ಸಿಜೆಐ ರಂಜನ್ ಗೊಗೊಯಿ ಅವರನ್ನು ಟೀಕಿಸಿದ್ದಾರೆ.

"ಗುಡ್ ಬೈ ಮಾಜಿ ಸಿಜೆಐ ಗೊಗೊಯಿ, ಈ ಅತ್ಯುನ್ನತ ಹುದ್ದೆಯಲ್ಲಿ ನೀವು ಬಿಟ್ಟು ಹೋಗಿರುವರುವ ಅವಮಾನಕಾರಿ ಹಾಗೂ ಹೇಡಿತನದ ಪರಂಪರೆಯನ್ನು ನೀವು ಅರಗಿಸಿಕೊಳ್ಳಬಲ್ಲಿರಿ ಎಂದು ಅಂದುಕೊಳ್ಳುತ್ತೇನೆ. @ಗೌತಮ್‍ಭಾಟಿಯಾ88 ಅವರ ಈ ಲೇಖನ  ಎಲ್ಲವನ್ನೂ ತಿಳಿಸುತ್ತದೆ'' ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.

ಗೊಗೊಯಿ ಅವರ ಅಧಿಕಾರಾವಧಿ, ಅವರ  ಕಾರ್ಯವೈಖರಿ ಮತ್ತು ಅವರು ಪ್ರಮಾದಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ಬ್ಲಾಗ್ ಲೇಖನವನ್ನು ವಿಶಾಲ್ ಶೇರ್ ಮಾಡಿದ್ದಾರೆ.

ದೀರ್ಘಕಾಲದಿಂದ ಬಾಕಿಯುಳಿದಿದ್ದ ಅಯೋಧ್ಯೆ ವಿವಾದದ ಕುರಿತಂತೆ ತಮ್ಮ ನಿವೃತ್ತಿಗೆ ಕೆಲವೇ ದಿನಗಳಿರುವಾಗ ಗೊಗೊಯಿ ತೀರ್ಪು ನೀಡಿದ್ದಾರೆ.

ಸುಪ್ರೀಂ ಕೋರ್ಟಿನ ಉದ್ಯೋಗಿಯೊಬ್ಬರು  ಗೊಗೊಯಿ ವಿರುದ್ಧ ಈ ಹಿಂದೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರೂ ಅವರಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿತ್ತು. ಸಂತ್ರಸ್ತೆ ತನ್ನ ಭಯ ನಿಜವಾಗಿದೆ ಎಂದು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News