ಡಿಸೆಂಬರ್ ಮೊದಲ ವಾರದಲ್ಲಿ ಮೈತ್ರಿ ಸರಕಾರ: ಶಿವಸೇನೆ

Update: 2019-11-19 15:53 GMT

ಮುಂಬೈ, ನ. 19: ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ನಿಗೂಢ ಹಾಗೂ ಬದ್ಧತೆ ಇಲ್ಲದ ಹೇಳಿಕೆಯ ಹೊರತಾಗಿಯೂ ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸುವ ಪ್ರಯತ್ನ ಸರಿಯಾದ ದಿಶೆಯಲ್ಲಿ ಸಾಗುತ್ತಿದೆ.

‘‘ನೀವು ಪವಾರ್ ಹಾಗೂ ನಮ್ಮ ಮಿತ್ರ ಪಕ್ಷದ ಬಗ್ಗೆ ಚಿಂತಿಸಬೇಡಿ. ಶೀಘ್ರದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅದು ಸ್ಥಿರ ಸರಕಾರವಾಗಲಿದೆ’’ ಎಂದು ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.

ಸೋಮವಾರ ಶರದ್ ಪವಾರ್ ನೀಡಿದ ಹೇಳಿಕೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಗೆ ಅಡ್ಡಿ ಉಂಟಾಗಲಿದೆ ಎಂದು ಹರಡಿರುವ ವದಂತಿಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ‘‘ಶರದ್ ಪವಾರ್ ಅವರನ್ನು ಹೇಳಿರುವುದನ್ನು ಅರ್ಥ ಮಾಡಿಕೊಳ್ಳಲು 100 ಜನ್ಮ ಎತ್ತಿ ಬರಬೇಕು’’ ಎಂದರು.

ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಸ್ಪರ್ಧೆಯಲ್ಲಿ ಎನ್‌ಸಿಪಿ ಬಿಜೆಪಿಯ ಬೆನ್ನು ಹತ್ತಿದೆ ಎಂಬುದನ್ನು ಶಿವಸೇನೆಯ ಪದಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿಯೊಂದಿಗಿನ ಯಾವುದೇ ಮೈತ್ರಿಯನ್ನು ಎನ್‌ಸಿಪಿ ನಿರಾಕರಿಸಿದೆ.

ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷ ಹಂಚಿಕೊಳ್ಳಲು ಬಿಜೆಪಿ ಒಪ್ಪಿಕೊಂಡರೆ, ಮರು ಮೈತ್ರಿ ಮಾಡಿಕೊಳ್ಳಲು ಪಕ್ಷ ಸಿದ್ಧವಿದೆ ಎಂದು ಶಿವಸೇನೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News