6 ತಿಂಗಳಲ್ಲಿ ಸರಕಾರಿ ಬ್ಯಾಂಕುಗಳಿಗೆ 95,700 ಕೋ.ರೂ.ಗೂ ಹೆಚ್ಚು ವಂಚನೆ: ನಿರ್ಮಲಾ ಸೀತಾರಾಮನ್

Update: 2019-11-19 17:03 GMT

ಹೊಸದಿಲ್ಲಿ, ನ.19: ಹಾಲಿ ವಿತ್ತವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ 95,700 ಕೋ.ರೂ.ಅಧಿಕ ಮೊತ್ತದ ವಂಚನೆ ಪ್ರಕರಣಗಳನ್ನು ಸರಕಾರಿ ಸ್ವಾಮ್ಯದ ಬ್ಯಾಂಕುಗಳು ವರದಿ ಮಾಡಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಆರ್‌ಬಿಐ ತಿಳಿಸಿರುವಂತೆ ಎ.1ರಿಂದ ಸೆ.30ರವರೆಗೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಒಟ್ಟು 95,760.49 ಕೋ.ರೂ.ಗಳನ್ನೊಳಗೊಂಡ 5,743 ವಂಚನೆ ಪ್ರಕರಣಗಳನ್ನು ವರದಿ ಮಾಡಿವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ ಅವರು,3.38 ಲಕ್ಷ ನಿಷ್ಕ್ರಿಯ ಕಂಪನಿಗಳ ಬ್ಯಾಂಕ್ ಖಾತೆಗಳ ಸ್ತಂಭನ ಸೇರಿದಂತೆ ಬ್ಯಾಂಕುಗಳಲ್ಲಿ ವಂಚನೆಗಳನ್ನು ತಡೆಯಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ತನ್ಮಧ್ಯೆ ಸಹಾಯಕ ವಿತ್ತ ಸಚಿವ ಅನುರಾಗ ಠಾಕೂರ್ ಅವರು,ಪಿಎಂಸಿ ಬ್ಯಾಂಕಿನಿಂದ ಹಣ ಹಿಂದೆಗೆದುಕೊಳ್ಳುವ ಮಿತಿಯನ್ನು 50,000 ರೂ.ಗೆ ಹೆಚ್ಚಿಸಿರುವುದರಿಂದ ಬ್ಯಾಂಕಿನ ಶೇ.78ರಷ್ಟು ಗ್ರಾಹಕರು ತಮ್ಮ ಸಂಪೂರ್ಣ ಠೇವಣಿಯನ್ನು ವಾಪಸ್ ಪಡೆಯಲು ಸಾಧ್ಯವಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News