ಕಾಶ್ಮೀರದಲ್ಲಿ ಅಂತರ್ಜಾಲ ನಿರ್ಬಂಧ ಶೀಘ್ರವೇ ತೆರವು: ಅಮಿತ್ ಶಾ

Update: 2019-11-20 08:51 GMT

ಹೊಸದಿಲ್ಲಿ,ಜ.20:ಸ್ಥಳೀಯಾಡಳಿತ ಮನವರಿಕೆಯಾದಾಗ ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯನ್ನು ಪುನರ್ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಸಂಸತ್ತಿಗೆ ತಿಳಿಸಿದ್ದಾರೆ.

  ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5ರಂದು ರದ್ದುಪಡಿಸಿದ ಬಳಿಕ ಪೊಲೀಸ್ ಗುಂಡಿನ ದಾಳಿಯಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. ಕಲ್ಲುತೂರಾಟದ ಘಟನೆಗಳು 805ರಿಂದ 544ಕ್ಕೆ ಇಳಿಕೆಯಾಗಿದೆ ಎಂದು ಶಾ ಹೇಳಿದ್ದಾರೆ.

‘‘ಸ್ಥಳೀಯ ಆಡಳಿತದ ಮನವರಿಕೆಯ ಬಳಿಕವೇ ಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಮತ್ತೆ ಆರಂಭಿಸಲಾಗುವುದು. ಕಾಶ್ಮೀರದಲ್ಲಿ ನೆರೆಯ ರಾಷ್ಟ್ರದ ಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’’ ಎಂದು ರಾಜ್ಯಸಭೆಗೆ ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News