ಡಿ.1ರಿಂದ ಶಬರಿಮಲೈಗೆ ಸಾರಿಗೆ ವ್ಯವಸ್ಥೆ

Update: 2019-11-20 18:00 GMT

ಬೆಂಗಳೂರು, ನ.20: ಕೆಎಸ್ಸಾರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.1,2019 ರಿಂದ ಹೊಸದಾಗಿ ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ಬಸ್‌ಗಳು ಸಂಚರಿಸಲಿವೆ.

ರಾಜಹಂಸ ಬಸ್ ಡಿ.1ರಂದು ಮಧ್ಯಾಹ್ನ 1ಕ್ಕೆ ಇಲ್ಲಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಬೆಳಗ್ಗೆ 8.15ಕ್ಕೆ ಶಬರಿಮಲೈಯನ್ನು ತಲುಪಲಿದೆ. ಹಾಗೆಯೇ ಶಬರಿಮಲೈಯಿಂದ ಸಂಜೆ 5ಕ್ಕೆ ಹೊರಟು ಮಧ್ಯಾಹ್ನ 12ಕ್ಕೆ ತಲುಪಲಿದೆ. ಬಸ್‌ನ ದರವು ಒಬ್ಬರಿಗೆ 940 ರೂ.ಆಗಿರುತ್ತದೆ.

ವೋಲ್ವೋ ಬಸ್ ಡಿ.1ರಂದು ಮಧ್ಯಾಹ್ನ 2ಕ್ಕೆ ಹೊರಟು ಬೆಳಗ್ಗೆ 6.45ಕ್ಕೆ ಶಬರಿಮಲೈಗೆ ತಲುಪಲಿದೆ. ಹಾಗೆಯೇ ಶಬರಿಮಲೈಯಿಂದ ಸಂಜೆ 6ಕ್ಕೆ ಹೊರಟು ಬೆಳಗ್ಗೆ 9.45ಕ್ಕೆ ಬೆಂಗಳೂರು ತಲುಪಲಿದೆ. ಬಸ್‌ನ ದರ ಒಬ್ಬರಿಗೆ 1250ರೂ.ಆಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News