ಈ ತೆಲಂಗಾಣ ಶಾಸಕನ ಪೌರತ್ವವೇ ರದ್ದು: ಕಾರಣ ಏನು ಗೊತ್ತೇ?

Update: 2019-11-21 03:55 GMT

ಹೊಸದಿಲ್ಲಿ, ನ.21: ತೆಲಂಗಾಣ ಶಾಸಕ ರಮೇಶ್ ಚೆನ್ನಮನೇನಿ ಎಂಬುವವರ ಪೌರತ್ವವನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜರ್ಮನ್ ಪ್ರಜೆಯಾಗಿರುವ ಇವರು ಈ ವಿಷಯವನ್ನು ಮುಚ್ಚಿಟ್ಟು, ಅಕ್ರಮವಾಗಿ ಭಾರತೀಯ ಪೌರತ್ವ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಶಾಸಕರಾಗಿರುವ ರಮೇಶ್, ತಮ್ಮ ವಿದೇಶಿ ಭೇಟಿಯ ಮಾಹಿತಿಗಳನ್ನು ಮುಚ್ಚಿಟ್ಟಿದ್ದರು ಎಂದು ಕೇಂದ್ರ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

"ಅವರು ಮಾಹಿತಿ ಮುಚ್ಚಿಟ್ಟು ಭಾರತ ಸರ್ಕಾರವನ್ನು ತಪ್ಪುದಾರಿಗೆ ಎಳೆದಿದ್ದಾರೆ. ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಒಂದು ವರ್ಷ ಮೊದಲು ಭಾರತದಲ್ಲಿ ವಾಸ ಇದ್ದಿರಲಿಲ್ಲ ಎನ್ನುವ ಸತ್ಯಾಂಶವನ್ನು ಅವರು ತಿಳಿಸಿದ್ದರೆ, ಗೃಹ ಸಚಿವಾಲಯ ಅವರಿಗೆ ಭಾರತೀಯ ಪೌರತ್ವ ಮಂಜೂರು ಮಾಡುತ್ತಿರಲಿಲ್ಲ" ಎಂಬ ಗೃಹ ಸಚಿವಾಲಯದ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ.

"ಚೆನ್ನಮನೇನಿ ಭಾರತದ ಪ್ರಜೆಯಾಗಿ ಮುಂದುವರಿಯುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅನುಕೂಲಕರವಲ್ಲ. ಆದ್ದರಿಂದ ಅವರ ಭಾರತೀಯ ಪೌರತ್ವ ರದ್ದುಪಡಿಸಲಾಗುತ್ತಿದೆ" ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.
ರಮೇಶ್ ಚೆನ್ನಮನೇನಿ ವೆಮುಲವಾಡ ಕ್ಷೇತ್ರದ ಟಿಆರ್‌ಎಸ್ ಶಾಸಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News