ಐಎಸ್‌ಎಸ್‌ಎಫ್ ವಿಶ್ವಕಪ್: ಶೂಟರ್ ಮನು ಭಾಕರ್ ಗೆ ಚಿನ್ನ

Update: 2019-11-21 05:40 GMT

ಪುಟಿಯನ್ (ಚೀನಾ) , ನ.21: ಯುವ ಶೂಟರ್   ಮನು ಭಾಕರ್ ಅವರು 2019 ರ ಐಎಸ್ಎಸ್ಎಫ್ ವಿಶ್ವಕಪ್ ನ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ ,

ಮನು ಭಾಕರ್ ಒಟ್ಟು ಫೈನಲ್ ನಲ್ಲಿ  244.7 ಪಾಯಿಂಟ್ ಗಳೊಂದಿಗೆ ಜೂನಿಯರ್ ವಿಭಾಗದಲ್ಲಿ ವಿಶ್ವ  ದಾಖಲೆಯನ್ನು ಮುರಿದರು. ಏತನ್ಮಧ್ಯೆ, ಐಎಸ್ಎಸ್ ವಿಶ್ವಕಪ್ ನಲ್ಲಿ ಮಹಿಳಾ 10 ಮೀಟರ್  ಏರ್ ಪಿಸ್ತೂಲ್ ಚಿನ್ನದ ಪದಕ ಗೆದ್ದ ಹೀನಾ ಸಿಧು ನಂತರ ಭಾಕರ್ ಎರಡನೇ ಭಾರತೀಯ ಶೂಟರ್ ಎನಿಸಿಕೊಂಡರು.

ಯಶಸ್ವಿನಿ ದೇಸ್ವಾಲ್ ಅಂತಿಮ ಸುತ್ತಿನಲ್ಲಿ 6 ನೇ ಸ್ಥಾನ ಪಡೆದರು.

ಸೆರ್ಬಿಯಾದ ಝೊರಾನಾ ಅರುನೋವಿಕ್ 241.9 ಪಾಯಿಂಟ್ ಗಳೊಂದಿಗೆ ಬೆಳ್ಳಿ ಗೆದ್ದರೆ, ಚೀನಾದ ಕ್ವಿಯಾನ್ ವಾಂಗ್ 221.8 ಅಂಕಗಳೊಂದಿಗೆ ಕಂಚು ಪಡೆದರು.

ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಮತ್ತು ಸೌರಭ್ ಚೌಧರಿ ಫೈನಲ್‌ಗೆ ಅರ್ಹತೆ ಪಡೆದರು.

ಇದಕ್ಕೂ ಮೊದಲು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮನು ಮತ್ತು ರಾಹಿ ಸರ್ನೋಬತ್ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News