ಮಹಾರಾಷ್ಟ್ರ:ಕಾಂಗ್ರೆಸ್ ಗೆ 13 ಸಚಿವ ಸ್ಥಾನ?

Update: 2019-11-27 09:27 GMT

ಮುಂಬೈ, ನ.27: ಮಹಾರಾಷ್ಟ್ರದಲ್ಲಿ  ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ  ನಾಯಕ ಉದ್ಧವ್ ಠಾಕ್ರೆ  ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಒಂದು ದಿನ ಮುಂಚಿತವಾಗಿ ಮೂರು ಪಕ್ಷಗಳು ಅಧಿಕಾರ ಹಂಚಿಕೆಯ ಬಗ್ಗೆ ಮಾತುಕತೆ ಆರಂಭಿಸಿದ್ದು, ಕಾಂಗ್ರೆಸ್ ಸ್ಪೀಕರ್ ಹುದ್ದೆಯ ಬೇಡಿಕೆಯನ್ನು ಕೈ ಬಿಟ್ಟಿದ್ದು, 13 ಸಚಿವ ಸ್ಥಾನಗಳನ್ನು ಪಡೆಯಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಒಂಬತ್ತು ಕ್ಯಾಬಿನೆಟ್ ಮತ್ತು ನಾಲ್ಕು ರಾಜ್ಯ ಸಚಿವ ಸ್ಥಾನಗಳನ್ನು ಪಡೆಯಲಿದೆ. ಪ್ರತಿಯಾಗಿ ಸ್ಪೀಕರ್ ಹುದ್ದೆಯ ಮೇಲಿನ ಹಕ್ಕನ್ನು ತ್ಯಜಿಸಲು ಒಪ್ಪಿದೆ. ಕ್ಯಾಬಿನೆಟ್ ಸ್ಥಾನಗಳಿಗೆ ವಿಜಯ್ ನಾಮದೇವರಾವ್ ವಾಡೆಟ್ಟಿವಾರ್, ಯಶೋಮತಿ ಠಾಕೂರ್, ನಾನಾ ಪಟೋಲೆ, ವರ್ಷಾ ಗಾಯಕ್ ವಾಡ್ ,  ಅಮೀನ್ ಪಟೇಲ್, ಅಶೋಕ್ ಚವಾಣ್ , ಅಮಿತ್ ದೇಶಮುಖ್ , ಬಂಟಿ ಪಾಟೀಲ್, ವಿಶ್ವಜಿತ್ ಕದಮ್, ಕೆ.ಸಿ.ಪಡ್ವಿ ಕಾಂಗ್ರೆಸ್ ನ ಸಂಭಾವ್ಯ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News