ಸೌರಶಕ್ತಿ ಕ್ಷೇತ್ರದಲ್ಲಿ ದಕ್ಷಿಣ ಕೊರಿಯಾದೊಂದಿಗೆ ಕಾಸಿಯಾ ಒಪ್ಪಂದ

Update: 2019-11-27 18:34 GMT

ಬೆಂಗಳೂರು, ನ.27: ಕರ್ನಾಟಕ ಸಣ್ಣ ಕೈಗಾರಿಕಾ ಸಂಘ(ಕಾಸಿಯಾ) ಬೆಂಗಳೂರಿನಲ್ಲಿ ಸೌರಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ದಕ್ಷಿಣ ಕೊರಿಯಾ ಸೌರಶಕ್ತಿ ನಿಯೋಗದ ಜತೆ ನಗರದಲ್ಲಿ ಸಭೆ ನಡೆಸಿತು.

ಈ ಕ್ಷೇತ್ರದಲ್ಲಿ ಭಾರತೀಯ ಕಂಪೆನಿಗಳೊಂದಿಗೆ ಸಹಭಾಗಿತ್ವ ಕುರಿತ ಆಲೋಚನೆಗಳ ವಿನಿಮಯ ಹಾಗೂ ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಸೌರಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶಗಳಲ್ಲಿ ಅನ್ವೇಷಣೆ ಮಾಡುವುದು ಈ ನಿಯೋಗದ ಭೇಟಿಯ ಉದ್ದೇಶವಾಗಿತ್ತು.

ಕಾಸಿಯಾ ಮತ್ತು ಜಿಯೋನಮ ಟೆಕ್ನೋ ಪಾರ್ಕ್ ಎರಡು ಸಂಸ್ಥೆಗಳ ನಡುವೆ ಸಹಕಾರವನ್ನು ಮುಂದುವರಿಸಲು ತಿಳಿವಳಿಕೆ ಪತ್ರ(ಎಂಒಯು)ಕ್ಕೆ ಸಹಿ ಹಾಕಲಾಯಿತು. ಎಂಒಯುಗೆ ಕಾಸಿಯಾ ಪರವಾಗಿ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಜಗೋಪಾಳ್ ಹಾಗೂ ಜಿಯೋನಮ್ ಟೆಕ್ನೋಪಾರ್ಕ್ ಪರವಾಗಿ ಯು ಡಾಂಗ್ ಗುಕ್ ಸಹಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News