ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಹಾರಾಷ್ಟ್ರದ 18 ನೇ ಮುಖ್ಯಮಂತ್ರಿ

Update: 2019-11-28 06:50 GMT

ಮುಂಬೈ, ನ.28:  ಮನೋಹರ್ ಜೋಶಿ ಮತ್ತು ನಾರಾಯಣ್ ರಾಣೆ ನಂತರ ಅಗ್ರ ಹುದ್ದೆಯನ್ನು ಅಲಂಕರಿಸಿದ ಮೂರನೇ ಸೇನಾ ನಾಯಕರಾಗಲಿದ್ದಾರೆ 59 ವರ್ಷದ ಠಾಕ್ರೆ.

ಜುಲೈ 27, 1960 ರಂದು ಮುಂಬೈಯಲ್ಲಿ ಜನಿಸಿದ ಠಾಕ್ರೆ ದಿವಂಗತ ಶಿವಸೇನೆ ಮುಖ್ಯಸ್ಥ ಬಾಲ್ ಠಾಕ್ರೆ ಅವರ ಪುತ್ರ ಮತ್ತು ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಿಂದ ಪದವೀಧರರಾಗಿದ್ದಾರೆ ಮತ್ತು ಪ್ರಕಟಿತ ಲೇಖಕರಾಗಿದ್ದಾರೆ. ಅವರು ವೃತ್ತಿಪರ ಛಾಯಾಗ್ರಾಹಕರಾಗಿದ್ದಾರೆ. ಅವರ ಛಾಯಾ ಚಿತ್ರಗಳು ವಿವಿಧ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದೆ ಮತ್ತು ಹಲವಾರು ಪ್ರದರ್ಶನಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.

ಠಾಕ್ರೆ ಅವರ ತಂದೆ ಸ್ಥಾಪಿಸಿದ ಪ್ರಮುಖ ಮರಾಠಿ ಪತ್ರಿಕೆ 'ಸಾಮ್ನಾ'ದ  ಪ್ರಧಾನ ಸಂಪಾದಕರಾಗಿದ್ದಾರೆ. 2002ರ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು, ಇದರಲ್ಲಿ ಶಿವಸೇನೆ ಉತ್ತಮ ಪ್ರದರ್ಶನ ನೀಡಿತು.

ಮಹಾರಾಷ್ಟ್ರ ರಾಜಕಾರಣದ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಠಾಕ್ರೆ ಕುಟುಂಬದ ಮೊದಲ ಸದಸ್ಯರೂ ಆಗಲಿದ್ದಾರೆ. ಸಂಜೆ 6.40 ಕ್ಕೆ ಶಿವಾಜಿ ಪಾರ್ಕ್‌ನಲ್ಲಿ ಉದ್ಧವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 59 ವರ್ಷದ ಠಾಕ್ರೆ ಅವರನ್ನು 2003 ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.  2004 ರಲ್ಲಿ ಪಕ್ಷದ ಅಧ್ಯಕ್ಷರಾದರು. .

ತಡವಾಗಿ ರಾಜಕೀಯ ಪ್ರವೇಶಿಸಿದ ಉದ್ಧವ್, ಅವರ ಪಕ್ಷವು ಹಲವಾರು ಸ್ಥಳೀಯ ಮತ್ತು ರಾಜ್ಯ ಚುನಾವಣೆಗಳನ್ನು ಸಮರ್ಥವಾಗಿ  ಪಕ್ಷವನ್ನು ಮುನ್ನಡೆಸಿದ್ದಾರೆ. 2007 ರಲ್ಲಿ ರೈತರು ಬೆಳೆ ನಾಶದಿಂದ ಸಂಕಷ್ಟಕ್ಕೆ ಸಿಲುಕಿದಾಗ ರೈತರಿಗಾಗಿ ಠಾಕ್ರೆ ಯಶಸ್ವಿ ಸಾಲ ಪರಿಹಾರ ಅಭಿಯಾನವನ್ನು ಆಯೋಜಿಸಿದ್ದರು.

ಅಕ್ಟೋಬರ್ 24 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ  ಹೊರ ಬಂದ ಕೂಡಲೇ, ಠಾಕ್ರೆ ಅವರು ಮಿತ್ರ ಪಕ್ಷ ಬಿಜೆಪಿಗೆ ಸಿಎಂ ಹುದ್ದೆಯನ್ನು ಹಂಚಿಕೊಳ್ಳುವ ಭರವಸೆಯನ್ನು ನೆನಪಿಸಿದರು. ಆದರೆ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅಂತಹ ಭರವಸೆ ನೀಡಿರುವುದನ್ನು ನಿರಾಕರಿಸಿದರು. ಕೋಪಗೊಂಡ ಠಾಕ್ರೆ ಅವರು ಸರ್ಕಾರ ರಚನೆ ಮಾತುಕತೆಗಳನ್ನು ಕೈಬಿಟ್ಟರು. 

ಇದೀಗ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ - ಹೊಸ ಮೈತ್ರಿಕೂಟದ ವಾಸ್ತುಶಿಲ್ಪಿಯಾಗಿ ಕಾಣಿಸಿಕೊಂಡಿದ್ದಾರೆ.

ಪ್ರಗತಿಪರ ಡೆಮಾಕ್ರಟಿಕ್ ಫ್ರಂಟ್ ಮೈತ್ರಿಕೂಟದಡಿಯಲ್ಲಿ ಹೊಸ ಸರ್ಕಾರ ರಚಿಸಲು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದಾಗ ಅವರು ಜುಲೈ 18, 1978 ರಂದು ಮೊದಲ ಬಾರಿಗೆ ಸಿಎಂ ಆದರು. ಈ ಸರ್ಕಾರ 1980 ರ ಫೆಬ್ರವರಿ 17 ರವರೆಗೆ ಇತ್ತು,  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಶರದ್ ಪವಾರ್  ಸರಕಾರವನ್ನು ಕಿತ್ತೊಗೆದರು.

ಕಾಂಗ್ರೆಸ್ ಗೆ  ಮರಳಿದ ನಂತರ ಪವಾರ್ ಅವರು ಜೂನ್ 25, 1988 ರಿಂದ ಮಾರ್ಚ್ 3, 1990 ರವರೆಗೆ ಮತ್ತೆ ಸಿಎಂ ಆಗಿದ್ದರು.

ಮುಖ್ಯ ಮಂತ್ರಿಯಾಗಿ ಅವರ ಮೂರನೆಯ ಅಧಿಕಾರಾವಧಿಯು ಮಾರ್ಚ್ 4, 1990 ರಿಂದ 1991 ರ ಜೂನ್ 25 ರವರೆಗೆ ಇತ್ತು. ಪ್ರಧಾನಿ ನರಸಿಂಹ ರಾವ್ ಸಂಪುಟಕ್ಕೆ ರಕ್ಷಣಾ ಸಚಿವರಾಗಿ ಸೇರಿಕೊಂಡರು. ಮುಂಬೈ ಗಲಭೆಯ ನಂತರ ಅವರನ್ನು ಮತ್ತೆ ರಾಜ್ಯಕ್ಕೆ ಕಳುಹಿಸಲಾಯಿತು. ಮಾರ್ಚ್ 6, 1993 ರಿಂದ ಮಾರ್ಚ್ 13, 1995 ರವರೆಗೆ ಮತ್ತೆ ಸಿಎಂ ಆಗಿದ್ದರು.

ಕಾಂಗ್ರೆಸ್ಸಿನ ದಿವಂಗತ ವಸಂತದಾದಾ ಪಾಟೀಲ್ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು - ಎಪ್ರಿಲ್ 19, 1977 ರಿಂದ ಮಾರ್ಚ್ 6, 1978 ರವರೆಗೆ,  ಮಾರ್ಚ್ 7 ರಿಂದ ಜುಲೈ 17, 1978 , ಫೆಬ್ರವರಿ 2, 1983, ಮಾರ್ಚ್ 9, 1985 ರವರೆಗೆ ಮತ್ತೆ ಮಾರ್ಚ್ 10, 1985 ರಿಂದ ಜೂನ್ 1, 1985 ರವರೆಗೆ ಮುಖ್ಯ ಮಂತ್ರಿಯಾಗಿದ್ದರು.

1960 ರಲ್ಲಿ ರಚನೆಯಾದ ನಂತರ ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತ ರಾವ್ ಚವಾಣ್. ಅವರು ಮೇ 1, 1960 ರಿಂದ ನವೆಂಬರ್ 20, 1962 ರವರೆಗೆ ಮುಖ್ಯ ಮಂತ್ರಿಯಾಗಿದ್ದರು. ಚೀನಾ ಜೊತೆಗಿನ ಯುದ್ಧದ ನಂತರ ರಕ್ಷಣಾ ಮಂತ್ರಿಯಾಗಿ ನೇಮಕಗೊಂಡರು.

ಮರೋತ್ರಾವ್ ಕಣ್ಣಮ್ವಾರ್ ಅವರು 1962 ರ ನವೆಂಬರ್ 21 ರಿಂದ 1963 ರ ನವೆಂಬರ್ 24 ತನಕ ಎರಡನೇ ಮುಖ್ಯಮಂತ್ರಿಯಾಗಿದ್ದರು. ಪಿ ಬಿ ಸಾವಂತ್ ಅವರು ನವೆಂಬರ್ 25 ರಿಂದ ಡಿಸೆಂಬರ್ 4, 1963 ರವರೆಗೆ ಮುಖ್ಯಮಂತ್ರಿಯಾಗಿದ್ದರು.

ವಸಂತರಾವ್ ನಾಯಕ್ ಅವರು ಡಿಸೆಂಬರ್ 5, 1963 ರಿಂದ ಫೆಬ್ರವರಿ 20, 1975 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದರು. ಬೇರೆ ಯಾವ ಮುಖ್ಯಮಂತ್ರಿಯೂ 11 ವರ್ಷಗಳ ನಿರಂತರ ಅಧಿಕಾರಾವಧಿಯನ್ನು ಅನುಭವಿಸಲಿಲ್ಲ.

ಫೆಬ್ರವರಿ 21, 1975 ರಿಂದ ಎಪ್ರಿಲ್ 16, 1977 ರವರೆಗೆ ಶಂಕರರಾವ್ ಚವಾಣ್ ಮುಖ್ಯಮಂತ್ರಿಯಾಗಿದ್ದರು. ಅವರು ಮಾರ್ಚ್ 14, 1986 ರಂದು ಮತ್ತೆ ಸಿಎಂ  ಆಗಿ ನೇಮಕಗೊಂಡರು.  ಜೂನ್ 24, 1988 ರವರೆಗೆ ಈ ಹುದ್ದೆಯಲ್ಲಿದ್ದರು.

ಎ.ಆರ್ ಅಂತುಲೆ ಅವರು  ಜೂನ್ 9, 1980 ರಿಂದ ಜನವರಿ 12, 1982 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಇದುವರೆಗೆ ರಾಜ್ಯದ ಮೊದಲ ಮುಸ್ಲಿಂ ಸಿಎಂ ಆಗಿದ್ದ ಎ.ಆರ್ ಅಂತುಲೆ  ಭ್ರಷ್ಟಾಚಾರದ ಆರೋಪದಿಂದ ಕೆಳಗಿಳಿಯಬೇಕಾಯಿತು.

ಬಾಬಾಸಾಹೇಬ್ ಭೋಸಲೆ ಅವರು ಜನವರಿ 20, 1982 ರಿಂದ ಫೆಬ್ರವರಿ 1, 1983 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಅವರು ಜೂನ್ 3, 1985 ರಿಂದ ಮಾರ್ಚ್ 7, 1986 ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಸುಧಾಕರ ರಾವ್  ನಾಯಕ್ 1991 ರ ಜೂನ್ 25 ರಿಂದ ಫೆಬ್ರವರಿ 23, 1993 ರವರೆಗೆ ಮತ್ತು ಮನೋಹರ್ ಜೋಶಿ ಮಾರ್ಚ್ 14, 1995 ರಿಂದ ಜನವರಿ 30, 1999 ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಫೆಬ್ರವರಿ 1, 1999 ರಂದು ಶಿವಸೇನೆ ಮುಖ್ಯಸ್ಥ ಬಾಲ್ ಠಾಕ್ರೆ ಜೋಶಿಯನ್ನು ಬದಲಿಸಲು ನಿರ್ಧರಿಸಿದಾಗ ನಾರಾಯಣ್ ರಾಣೆ ಮುಖ್ಯಮಂತ್ರಿಯಾದರು.  ಅಕ್ಟೋಬರ್ 17, 1999 ರವರೆಗೆ ರಾಣೆ ಈ ಹುದ್ದೆಯಲ್ಲಿದ್ದರು.

ವಿಲಾಸ್ ರಾವ್ ದೇಶ್ ಮುಖ್  ಅವರು ಅಕ್ಟೋಬರ್ 18, 1999 ರಂದು ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರವನ್ನು ಮುನ್ನಡೆಸುವ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು ಮತ್ತು ಜನವರಿ 18, 2003 ರವರೆಗೆ ಮುಂದುವರಿದರು. ಅವರು ನವೆಂಬರ್ 1, 2004 ರಂದು ಮುಖ್ಯಮಂತ್ರಿಯಾಗಿ ಮರಳಿದರು, ಆದರೆ 26/11 ರ ನಂತರ 2008 ರ ಡಿಸೆಂಬರ್ 7 ರಂದು ರಾಜೀನಾಮೆ ನೀಡಿದರು.

ಸುಶೀಲ್ ಕುಮಾರ್  ಶಿಂಧೆ 2003 ರ ಜನವರಿ 18 ರಿಂದ ಅಕ್ಟೋಬರ್ 31, 2004 ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಅಶೋಕ್ ಚವಾಣ್  ಅವರು ಡಿಸೆಂಬರ್ 8, 2008 ರಂದು ದೇಶಮುಖ್ ಅವರಿಂದ ಅಧಿಕಾರ ವಹಿಸಿಕೊಂಡರು. ಅವರ ಮೊದಲ ಅವಧಿ 2009 ರ ನವೆಂಬರ್ 6 ರವರೆಗೆ ಇತ್ತು.  ವಿಧಾನಸಭಾ ಚುನಾವಣೆಯ ನಂತರ ಅವರು ಮುಖ್ಯಮಂತ್ರಿಯಾಗಿ ಮುಂದುವರಿದರು, ಆದರೆ 2010 ರ ನವೆಂಬರ್‌ನಲ್ಲಿ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದ ಹಿನ್ನೆಲೆಯಲ್ಲಿ   ರಾಜೀನಾಮೆ ನೀಡಿದರು.

ಪೃಥ್ವಿರಾಜ್ ಚವಾಣ್ ಅವರು 2010 ರ ನವೆಂಬರ್ 10 ರಿಂದ 2014 ರ ಸೆಪ್ಟೆಂಬರ್ 27 ರವರೆಗೆ ಮುಖ್ಯಮಂತ್ರಿಯಾಗಿದ್ದರು. 

ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಸರಿನ ವಿರುದ್ಧ ಎರಡು ದಾಖಲೆಗಳಿವೆ.ವಸಂತರಾವ್ ನಾಯಕ್ ನಂತರ 2014 ರ ಅಕ್ಟೋಬರ್ 31 ರಿಂದ 2019 ರ ನವೆಂಬರ್ 9 ರವರೆಗೆ 5 ವರ್ಷ ಪೂರ್ಣಗೊಳಿಸಿದ ಮಹಾರಾಷ್ಟ್ರದ ಮೊದಲ ಸಿಎಂ ಆದರು.

ಅವರ ಎರಡನೇ ಅವಧಿಯ ಬಾರಿ  2019 ರ ನವೆಂಬರ್ 23 ರಂದು ಪ್ರಮಾಣವಚನ ಸ್ವೀಕರಿಸಿದರು, ಆದರೆ ನವೆಂಬರ್ 26 ರಂದು ಸುಪ್ರೀಂ ಕೋರ್ಟ್  ಬಹುಮತದ  ಪರೀಕ್ಷೆಗೆ ಆದೇಶಿಸಿದಾಗ ರಾಜೀನಾಮೆ ನೀಡಿದರು.  ಠಾಕ್ರೆಗೆ  ಮುಖ್ಯಮಂತ್ರಿಯಾಗುವ ಅವಕಾಶ ಒಲಿದು  ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News