ಉಪ ಚುನಾವಣೆ: ಮಧ್ಯಾಹ್ನ 1 ಗಂಟೆಯವರೆಗೆ 32.51 ಶೇ. ಮತದಾನ

Update: 2019-12-05 08:55 GMT
ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ತಾಯಿ, ಪತ್ನಿ, ಪುತ್ರರೊಂದಿಗೆ ಮತ ಚಲಾಯಿಸಿದರು.

ಬೆಂಗಳೂರು, ಡಿ.5: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಒಟ್ಟು 32.51 ಶೇ. ಮತದಾನವಾಗಿದೆ.

15 ಕ್ಷೇತ್ರಗಳಲ್ಲಿ ಮಧ್ಯಾಹ್ನದವರೆಗೆ ಚಲಾವಣೆಯಾಗಿರುವ ಮತಗಳ ವಿವರ ಇಂತಿವೆ.

ಗೋಕಾಕ್- 37.37 ಶೇ., ಕಾಗವಾಡ-37.72 ಶೇ., ಅಥಣಿ-40.89 ಶೇ., ಯಲ್ಲಾಪುರ-41.72 ಶೇ., ವಿಜಯನಗರ-34.95 ಶೇ., ರಾಣೆಬೆನ್ನೂರು-36.09 ಶೇ, ಹಿರೇಕೆರೂರು-38.63 ಶೇ., ಹುಣಸೂರು-38.2 ಶೇ., ಕೆ.ಆರ್.ಪೇಟೆ- 39.47 ಶೇ., ಚಿಕ್ಕಬಳ್ಳಾಪುರ- 39.03, ಹೊಸಕೋಟೆ- 33.24 ಶೇ., ಮಹಾಲಕ್ಷ್ಮೀ ಲೇಔಟ್- 22.71 ಶೇ., ಕೆ.ಆರ್.ಪುರ-22.23 ಶೇ., ಶಿವಾಜಿ ನಗರ-22.12 ಶೇ. ಹಾಗೂ ಯಶವಂತಪುರ ದಲ್ಲಿ 27.29 ಶೇ. ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News