ಡಿಸೆಂಬರ್ 1ರ ಟ್ವೀಟ್ - ಹೈದರಾಬಾದ್ ಎನ್‌ಕೌಂಟರ್‌ಗೆ ಸಾಮ್ಯತೆ !

Update: 2019-12-07 03:49 GMT

ಹೊಸದಿಲ್ಲಿ: ಹೈದರಾಬಾದ್ ಪಶುವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಕ್ಕೂ ಐದು ದಿನಗಳ ಹಿಂದೆ ಮಾಡಲಾದ ಟ್ವೀಟ್‌ಗೂ ಸಾಮ್ಯತೆ ಇರುವುದು, ಈ ಎನ್‌ಕೌಂಟರ್ ಪೂರ್ವನಿಯೋಜಿತ ಎನ್ನುವ ಅನುಮಾನವನ್ನು ದಟ್ಟವಾಗಿಸಿದೆ.

"ಸರ್ ನೀವು ಅತ್ಯಾಚಾರಿಗಳಿಗೆ ಶಿಕ್ಷೆ ನೀಡಬಹುದು; ಅವರನ್ನು ಅಪರಾಧ ಸ್ಥಳಕ್ಕೆ ಕರೆದೊಯ್ಯಬೇಕು. ಸಂತ್ರಸ್ತೆಯನ್ನು ಸುಟ್ಟ ಸ್ಥಳದಲ್ಲಿ ಅದೇ ವಾತಾವರಣವನ್ನು ಪುನರ್‌ ಸೃಷ್ಟಿಸಬೇಕು. ಖಚಿತವಾಗಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ನಮ್ಮ ಪೊಲೀಸರು ಅವರಿಗೆ ಗುಂಡಿಕ್ಕದೆ ಬೇರೆ ಮಾರ್ಗವೇ ಇರುವುದಿಲ್ಲ. ದಯವಿಟ್ಟು ಒಮ್ಮೆ ಯೋಚಿಸಿ" ಎಂದು @ಕೊನಾಫ್ಯಾನ್‌ಕ್ಲಬ್ ಎಂಬ ಅಜ್ಞಾತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಡಿ. 1ರಂದು ಟ್ವೀಟ್ ಮಾಡಲಾಗಿತ್ತು. ಕುಲಕುಂಟ್ಲ ತಾರಕ ರಾಮರಾವ್ ಎಂಬುವವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಈ ಟ್ವೀಟ್ ಮಾಡಲಾಗಿತ್ತು.

ಶುಕ್ರವಾರ ಈ ಹ್ಯಾಂಡಲ್ ಮಾಯವಾಗಿದ್ದು, ಇದನ್ನು ಹುಡುಕಿದರೆ, "ಈ ಖಾತೆ ಅಸ್ತಿತ್ವದಲ್ಲಿಲ್ಲ" ಎಂಬ ಮಾಹಿತಿ ಬರುತ್ತದೆ. ಆದರೆ ವೆಬ್ ಆರ್ಕಿವ್‌ನಲ್ಲಿ ಹುಡುಕಿದಾಗ, ಈ ಖಾತೆಯು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಸೇರಿದ್ದಾಗಿದ್ದು, 2019ರ ಫೆಬ್ರವರಿಯಿಂದ ಸಕ್ರಿಯವಾಗಿರುವುದು ಕಂಡು ಬರುತ್ತದೆ.

ಈ ಟ್ವೀಟ್ ಮತ್ತು ಎನ್‌ಕೌಂಟರ್ ನಡೆದ ಬಗ್ಗೆ ಟ್ವಿಟ್ಟರ್ ಬಳಕೆದಾರರು ಸಮಾನ ಲಕ್ಷಣಗಳನ್ನು ಬೆಟ್ಟು ಮಾಡಿದ್ದಾರೆ. ಯಾಸಿರ್ ನಬಿ ಎಂಬ ಬಳಕೆದಾರರೊಬ್ಬರು, "ಟ್ವಿಟ್ಟರ್ ಮಾಹಿತಿ ಅಂಶವನ್ನು ಪೊಲೀಸರು ಬಳಸಿದರೇ ?" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News