ಝಾರ್ಖಂಡ್ : ಬಹರಗೋರದಲ್ಲಿ ಗರಿಷ್ಠ ಮತದಾನ

Update: 2019-12-07 04:56 GMT

ಜಮ್ಶೆಡ್ಪುರ, ಡಿ.7: ಝಾರ್ಖಂಡ್‌ನ 20 ಕ್ಷೇತ್ರಗಳಲ್ಲಿ ಶನಿವಾರ ಬೆಳಿಗ್ಗೆ ಎರಡನೇ ಹಂತದ ಮತದಾನ ಆರಂಭವಾಗಿದ್ದು, ವಿಧಾನಸಭೆಯ 81 ಸದಸ್ಯರನ್ನು ಆಯ್ಕೆ ಮಾಡಲು ಐದು ಹಂತಗಳಲ್ಲಿ ಮತದಾನ ನಡೆಯಲಿದೆ.  20 ಸ್ಥಾನಗಳಿಗೆ  ಬಿಗಿ  ಭದ್ರತಾ ವ್ಯವಸ್ಥೆಯ ಮಧ್ಯೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು.

ಬೆಳಗ್ಗೆ 9 ಗಂಟೆ ತನಕ ಬಹರಗೋರದಲ್ಲಿ ಗರಿಷ್ಠ ಮತದಾನವಾಗಿದೆ.

18 ಕ್ಷೇತ್ರಗಳಲ್ಲಿ ಮತದಾನ 3 ಗಂಟೆಗೆ ಕೊನೆಗೊಳ್ಳಲಿದೆ. ಆದರೆ ಜಮ್ಶೆಡ್ಪುರ (ಪೂರ್ವ) ಮತ್ತು ಜಮ್ಶೆಡ್ಪುರ (ಪಶ್ಚಿಮ) ಕ್ಷೇತ್ರಗಳ ಮತದಾರರು ಸಂಜೆ 5 ಗಂಟೆಯವರೆಗೆ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಝಾರ್ಖಂಡ್‌ ಮುಖ್ಯ ಚುನಾವಣಾ ಅಧಿಕಾರಿ ವಿನಯ್ ಕುಮಾರ್ ಚೌಬೆ, " ಎರಡನೇ ಹಂತದ ಮತದಾನ ನಡೆಯುವ ಹಲವಾರು ಕ್ಷೇತ್ರಗಳು ನಕ್ಸಲ್ ಪೀಡಿತವಾಗಿವೆ. ಆದ್ದರಿಂದ, ಭದ್ರತಾ ಕ್ರಮಗಳ ಭಾಗವಾಗಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ" ಎಂದು ಹೇಳಿದರು.

 ರಘುಬರ್ ದಾಸ್ ಮತದಾನ : ಬಿಜೆಪಿ ಮುಖಂಡ ಮತ್ತು ಮುಖ್ಯಮಂತ್ರಿ ರಘುಬರ್ ದಾಸ್ ಜಮ್ಶೆಡ್ಪುರದ ಭಾಲುಬಾಸದಲ್ಲಿ ಮತ ಚಲಾಯಿಸಿದ್ದಾರೆ. ರಘುಬರ್ ದಾಸ್ ತಮ್ಮ ಮಾಜಿ ಕ್ಯಾಬಿನೆಟ್ ಸಹೋದ್ಯೋಗಿ ಮತ್ತು ಸ್ವತಂತ್ರ ಅಭ್ಯರ್ಥಿ ಸರಮ್ ರಾಯ್ ಅವರಿಂದ ಜಮ್ಶೆಡ್ಪುರ (ಪೂರ್ವ) ಕ್ಷೇತ್ರದಲ್ಲಿ ಸವಾಲು ಎದುರಿಸುತ್ತಿದ್ದಾರೆ.

ಎಎಸ್ಐ ಸಾವು:ಝಾರ್ಖಂಡ್‌ನ ಬಹರಗೋರಾ ವಿಧಾನಸಭಾ ಸ್ಥಾನದಲ್ಲಿ ಹೃದಯಾಘಾತದಿಂದ  ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಎಎಸ್ಐ ಹರಿಚಂದ್ರ ಗಿರಿ ಶುಕ್ರವಾರ ರಾತ್ರಿ ಊಟ ಮಾಡಿದ ನಂತರ ಮಲಗಿದ್ದರು, ಆದರೆ ಬೆಳಗ್ಗೆ ಎಚ್ಚರಗೊಳ್ಳಲಿಲ್ಲ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ  ಘೋಷಿಸಿದರು.

ಗುಂಡಿನ ದಾಳಿ:  ಝಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಸಿರ್ಸಾ ಬ್ಲಾಕ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ. ಗುಮ್ಲಾ ಜಿಲ್ಲೆಯ ಬೂತ್ ಸಂಖ್ಯೆ 36 ರಲ್ಲಿ ಮತದಾನ ಇದರಿಂದಾಗಿ ತಾತ್ಕಾಲಿಕವಾಗಿ ಪರಿಣಾಮ ಬೀರಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲಾಗುತ್ತಿದೆ.

ಬೆಳಗ್ಗೆ  9 ಗಂಟೆ ತನಕ ನಡೆದ ಮತದಾನದ ಶೇಕಡಾವಾರು ಪ್ರಮಾಣ ಇಂತಿವೆ.

ಘಾಟ್ಶಿಲಾ- 14%

ಬಹರಗೋರ- 16.3%

ಪೊಟ್ಕಾ 14.9%

ಚೈಬಾಸಾ- 13.3%

ಜುಗ್ಸಲೈ- 14.8%

ಜಮ್ಶೆಡ್ಪುರ (ಪೂರ್ವ) - 13.2%

ಜಮ್ಶೆಡ್ಪುರ (ಪಶ್ಚಿಮ) - 13.3%

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News