ಈ ವರ್ಷ 86 ಅತ್ಯಾಚಾರ ಪ್ರಕರಣಗಳೊಂದಿಗೆ ಉತ್ತರ ಪ್ರದೇಶದ ರೇಪ್ ರಾಜಧಾನಿಯಾದ ಉನ್ನಾವೋ

Update: 2019-12-07 14:35 GMT

ಲಕ್ನೋ : ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ವರ್ಷದ ಜನವರಿಯಿಂದ ನವೆಂಬರ್ ತನಕ ಒಟ್ಟು 86 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ 'ಅತ್ಯಾಚಾರ ರಾಜಧಾನಿ'ಯೆಂದೇ ಕರೆಯಲು ಅದೀಗ ಅರ್ಹವಾದಂತಿದೆ.

ರಾಜ್ಯದ ರಾಜಧಾನಿ ಲಕ್ನೋದಿಂದ ಸುಮಾರು 63 ಕಿಮೀ ದೂರವಿರುವ ಉನ್ನಾವೋದ ಜನಸಂಖ್ಯೆ ಸುಮಾರು 31 ಲಕ್ಷ. ವರದಿಗಳ ಪ್ರಕಾರ ಉನ್ನಾವೋದಲ್ಲಿ ಈ ವರ್ಷ ಇಲ್ಲಿಯ ತನಕ ಮಹಿಳೆಯರ ಮೇಲಿನ 185 ಲೈಂಗಿಕ ಕಿರುಕುಳ ಪ್ರಕರಣಗಳು  ವರದಿಯಾಗಿವೆ.

ಬಿಜೆಪಿಯ ಕುಲದೀಪ್ ಸೇಂಗರ್ ಆರೋಪಿಯಾಗಿರುವ ಉನ್ನಾವೋ ಅತ್ಯಾಚಾರ ಪ್ರಕರಣ ಹಾಗೂ ಇತ್ತೀಚಿಗಿನ ಇನ್ನೊಂದು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಜಾಮೀನಿನ ಮೇಲಿದ್ದ ಆರೋಪಿಗಳು ಬೆಂಕಿ ಹಚ್ಚಿ ಸಾಯಿಸಿದ ಪ್ರಕರಣದ  ಹೊರತಾಗಿ ಪೂರ್ವಾ ಎಂಬಲ್ಲಿ ನವೆಂಬರ್ 1ರಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ಇವುಗಳ ಹೊರತಾಗಿ ಅಸೋಹ, ಅಜ್ಗೈನ್, ಮಖಿ ಹಾಗೂ ಬಂಗರಮೌ ಎಂಬಲ್ಲಿಯೂ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ.

ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಒಂದೋ ಬಂಧಿಸಲಾಗಿದೆ, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಇಲ್ಲವೇ ಅವರು ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News