ಶಿವಾಜಿನಗರದಲ್ಲಿ ಗೆಲುವಿನ ನಗೆ ಬೀರಿದ ರಿಝ್ವಾನ್ ಅರ್ಷದ್

Update: 2019-12-09 12:51 GMT

ಬೆಂಗಳೂರು, ಡಿ.9: ಶಿವಾಜಿನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಅರ್ಷದ್, ಬಿಜೆಪಿ ಅಭ್ಯರ್ಥಿ ಎಂ.ಸರವಣ ಅವರನ್ನು 13,521 ಮತಗಳ ಅಂತರದಿಂದ ಸೋಲಿಸಿ, ಗೆಲುವಿನ ನಗೆ ಬೀರಿದ್ದಾರೆ.

ಮಾಜಿ ಸಚಿವ ಆರ್.ರೋಷನ್ ಬೇಗ್ ರಾಜೀನಾಮೆಯಿಂದಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದ್ದು, ಕಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಸರವಣ, ಜೆಡಿಎಸ್‌ನ ತನ್ವೀರ್ ಅಹ್ಮದ್, ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಹನ್ನಾನ್, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಒಟ್ಟು 19 ಮಂದಿ ಸ್ಪರ್ಧಿಯಲ್ಲಿದ್ದರು.

ಬಿಜೆಪಿಯ ಸರವಣ 36367 ಮತ ಪಡೆದು ಎರಡನೇ ಸ್ಥಾನಕ್ಕೆ ತಲುಪಿದರೆ, ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಹನ್ನಾನ್ 3,141 ಮತಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಜೆಡಿಎಸ್‌ನ ತನ್ವೀರ್ ಅಹ್ಮದ್ ಬರೀ 1098 ಮತ ಗಳಿಸಿದರೆ, ವಾಟಾಳ್ ನಾಗರಾಜ್ 255 ಮತಗಳಿಸಿದ್ದಾರೆ. 986 ನೋಟಾ ಮತಗಳು ಚಲಾವಣೆಯಾಗಿವೆ.

ಶಾಸಕರನ್ನು ಖರೀದಿಸಿ, ಆಪರೇಷನ್ ಮಾಡುವ ಮೂಲಕ ಬಿಜೆಪಿ ಸರಕಾರ ರಚನೆ ಮಾಡಿತು. ಜತೆಗೆ ತಮ್ಮ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಶಾಸಕರಿರಲಿ, ಬಿಬಿಎಂಪಿ ಸದಸ್ಯರನ್ನೂ ಸೆಳೆಯುವುದಾದರೆ, ನಮ್ಮಂತಹ ಬಡವರು ಏನು ಮಾಡಬೇಕು. ಇಂತಹ ಬೆಳವಣಿಗೆ ಅಷ್ಟು ಸರಿಯಲ್ಲ. ಆದರೆ, ಜನತೆ ಅವರ ವಿರುದ್ಧವಾಗಿ ತೀರ್ಪು ನೀಡಿರುವುದು ಸಮಾಧಾನಕರ ಸಂಗತಿ.

-ರಿಝ್ವಾನ್ ಅರ್ಷದ್, ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News