ಶಸ್ತ್ರಾಸ್ತ್ರಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆಯ ಅಂಗೀಕಾರ

Update: 2019-12-09 14:18 GMT

ಹೊಸದಿಲ್ಲಿ,ಡಿ.9: ಶಸ್ತ್ರಾಸ್ತ್ರಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಸೋಮವಾರ ಅಂಗೀಕರಿಸಿದ್ದು,ಇದು ಅಕ್ರಮ ಶಸ್ತ್ರಾಸ್ತ್ರಗಳ ತಯಾರಕರು ಮತ್ತು ಅವುಗಳನ್ನು ಹೊಂದಿರುವವರಿಗೆ ಗರಿಷ್ಠ ಆಜೀವ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸುತ್ತದೆ.

ನೂತನ ಮಸೂದೆಯಡಿ ಮದುವೆ ಇತ್ಯಾದಿ ಸಂಭ್ರಮಾಚರಣೆಗಳ ಸಂದರ್ಭ ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವಾಗುವಂತೆ ಪಿಸ್ತೂಲು ಅಥವಾ ಬಂದೂಕುಗಳಿಂದ ಅಜಾಗ್ರತೆಯಿಂದ ಗುಂಡು ಹಾರಿಸುವವರಿಗೆ ಎರಡು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ಒಂದು ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಮೂರು ಗಂಟೆ ಕಾಲ ನಡೆದ ಚರ್ಚೆಗೆ ಉತ್ತರಿಸಿದ ಗೃಹಸಚಿವ ಅಮಿತ್ ಶಾ ಅವರು,ದೇಶದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ ಹೇರುವುದು ಅಗತ್ಯವಾಗಿರುವುದರಿಂದ ಈ ಮಸೂದೆಯನ್ನು ತರಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News